ಬೆಂಗಳೂರು : ರಾಜ್ಯ ಸರ್ಕಾರವು ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 70% ರಷ್ಟು ಕೆಲಸ ನೀಡುವ ಉದ್ದೇಶದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಅನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
FACT CHECK: ಕೇಂದ್ರ ಸರ್ಕಾರದಿಂದ ಹೆಣ್ಣುಮಕ್ಕಳಿಗೆ ₹ 1,50,000 ಸ್ಕಾಲರ್? ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು
ಈ ಕುರಿತು ಮಾಹಿತಿ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶ ಒದಗಿಸುವ ಉದ್ದೇಶದ ಕನ್ನಡ ಭಾಷಾ ಸಮಗ್ರ ಅಭಿವರದ್ಧಿ ವಿಧೇಯಕ-2022 ಅನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
BIGG NEWS : ಹೋಟೆಲ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ : ಸದ್ಯಕ್ಕೆ ಹೋಟೆಲ್ ಊಟ, ತಿಂಡಿ ದರ ಹೆಚ್ಚಳಕ್ಕೆ ಬ್ರೇಕ್!
ರಾಜ್ಯದಲ್ಲಿ ಉದ್ಯಮ ಚಟುವಟಿಕೆ ಆರಂಭಿಸುವ ಪ್ರತಿ ಸಂಸ್ಥೆಯು ಸ್ಥಳೀಯ ಕನ್ನಡಿಗರಿಗೆ ಶೇ. 70 ರಷ್ಟು ಉದ್ಯೋಗ ನೀಡುವುದು ಕಡ್ಡಾಯ. ಈ ಕಾನೂನು ಉಲ್ಲಂಘಿಸಿದ ಉದ್ದಿಮೆಗೆ ರಾಜ್ಯ ಸರ್ಕಾರದ ಸೌಲಭ್ಯ ಹಾಗೂ ರಿಯಾಯಿತಿಗಳನ್ನು ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.