ನವದೆಹಲಿ: ಟ್ವಿಟರ್ನಲ್ಲಿ ಬ್ಲೂ ಟಿಕ್(Twitter Blue Tick) ಸೇವೆಯ ಮರುಪ್ರಾರಂಭವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಎಲಾನ್ ಮಸ್ಕ್ ಮಂಗಳವಾರ ಘೋಷಿಸಿದ್ದಾರೆ.
ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತ್ರ, ಬ್ಲೂ ಟಿಕ್ ಪರಿಶೀಲನೆ ಯೋಜನೆಯನ್ನು ಪರಿಚಯಿಸಿದರು. ಈ ಬೆನ್ನಲ್ಲೇ, ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಈ ಸೋಗು ಹಾಕುವಿಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವವರೆಗೂ ಬ್ಲೂ ವೆರಿಫೈಡ್ನ ಮರುಪ್ರಾರಂಭವನ್ನು ತಡೆಹಿಡಿಯುವುದಾಗಿ ಮಸ್ಕ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Holding off relaunch of Blue Verified until there is high confidence of stopping impersonation.
Will probably use different color check for organizations than individuals.
— Elon Musk (@elonmusk) November 22, 2022
ಬ್ಲೂ ಟಿಕ್ ನೀಡುವ ತೀರ್ಮಾನವನ್ನು ತಡೆಹಿಡಿಯಲಾಗಿದ್ದು, ವೈಯಕ್ತಿಕ ಹಾಗೂ ಸಂಸ್ಥೆಗಳಿಗೆ ವಿವಿಧ ಬಣ್ಣಗಳ ಟಿಕ್ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಇದನ್ನು ಅಂತಿಮಗೊಳಿಸುವವರೆಗೂ ಬಳಕೆದಾರರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎನ್ನಲಾಗಿದೆ.
ಟ್ವಿಟರ್ ಇತ್ತೀಚೆಗೆ ಬ್ಲೂ ಟಿಕ್ಗಾಗಿ ತಿಂಗಳಿಗೆ 8 ಡಾಲರ್ ಪಾವತಿಸಬೇಕು ಎಂದು ಘೋಷಿಸಿತ್ತು. ಆದ್ರೆ, ನಕಲಿ ಖಾತೆಗಳ ಹಾವಳಿ ಹೆಚ್ಚಳದಿಂದ ಈ ಸೇವೆಯ ಮರುಪ್ರಾರಂಭವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಮತ್ತು ಟ್ವಿಟರ್ನ ಬೇಡಿಕೆಯ ನೀಲಿ ಚೆಕ್ ಚಂದಾದಾರಿಕೆ ಸೇವೆಯನ್ನು ನವೆಂಬರ್ 29 ರಂದು ಮರುಪ್ರಾರಂಭಿಸಲಾಗುವುದು ಎಂದು ಹೇಳಿತ್ತು.
BIG UPDATE: ಕೊಲಂಬಿಯಾದ ವಸತಿ ಪ್ರದೇಶದಲ್ಲಿ ಸಣ್ಣ ವಿಮಾನ ಪತನ, 8 ಮಂದಿ ಸಾವು
FACT CHECK: ಕೇಂದ್ರ ಸರ್ಕಾರದಿಂದ ಹೆಣ್ಣುಮಕ್ಕಳಿಗೆ ₹ 1,50,000 ಸ್ಕಾಲರ್? ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು
BIGG NEWS : ಹೋಟೆಲ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ : ಸದ್ಯಕ್ಕೆ ಹೋಟೆಲ್ ಊಟ, ತಿಂಡಿ ದರ ಹೆಚ್ಚಳಕ್ಕೆ ಬ್ರೇಕ್!
BIG UPDATE: ಕೊಲಂಬಿಯಾದ ವಸತಿ ಪ್ರದೇಶದಲ್ಲಿ ಸಣ್ಣ ವಿಮಾನ ಪತನ, 8 ಮಂದಿ ಸಾವು