ಇಂಡೋನೇಷ್ಯಾ: 5.6 ತೀವ್ರತೆಯ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರಿಸಿದ್ದು, ಕನಿಷ್ಠ 162 ಜನರು ಸಾವನ್ನಪ್ಪಿದ್ದಾರೆ. ಇನ್ನು 700 ಜನರು ಗಾಯಗೊಂಡಿದ್ದಾರೆ.
ರಾಜಧಾನಿ ಜಕಾರ್ತದಿಂದ 75 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಜಾವಾದ ಸಿಯಾನ್ಜೂರ್ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲೇ ಗಾಯಾಳುಗಳಿಂದ ಆಸ್ಪತ್ರೆ ತುಂಬಿವೆ ಎನ್ನಲಾಗ್ತಿದೆ.
ತಕ್ಷಣಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಪಟ್ಟಣದ ಮೂರು ಆಸ್ಪತ್ರೆಗಳು ತುಂಬಿ ತುಳುಕಿವೆ. ಇನ್ನು 700 ಗಾಯಾಳುಗಳ ಸಂಖ್ಯೆಯನ್ನ ನಿಭಾಯಿಸಲು ಸಾಕಷ್ಟು ಕೊಠಡಿಗಳು ಇಲ್ಲ ಎಂದು ವರದಿಯಾಗಿದೆ.
ಹಳೆ ‘ಜನತಾದಳ’ ಸ್ಥಾಪಿಸಲು ಇಬ್ರಾಹಿಂ ಪ್ಲ್ಯಾನ್ : ಸಿಎಂ ಬೊಮ್ಮಾಯಿಗೂ ವಾಪಸ್ ಆಗಲು ಆಹ್ವಾನ