ಬೆಂಗಳೂರು : ಅಕ್ರಮ ವೋಟರ್ ಐಡಿ ( Voter Id Scam ) ಹಗರಣ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ವಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿದೆ.
ಈ ಬೆನ್ನಲ್ಲೇ ವೋಟರ್ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಾವುದೇ ತನಿಖೆಗೆ ಆದೇಶ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಏನೇ ಅಕ್ರಮ ನಡೆದರೂ ಚುನಾವಣಾ ಆಯೋಗಕ್ಕೆ ಮಾತ್ರ ತನಿಖೆ ನಡೆಸುವ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿಗಳ ನಿರ್ವಹಣೆ, ಚುನಾವಣೆಗಳನ್ನು ನಡೆಸುವುದು, ಚುನಾವಣಾ ವಿಷಯಗಳಲ್ಲಿ ಅಕ್ರಮ ಆರೋಪ ಬಂದಾಗ ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ಮಾತ್ರ ಅಧಿಕಾರವಿದೆ ಹೊರತು ರಾಜ್ಯ ಸರ್ಕಾರಕ್ಕಿಲ್ಲ ಎಂದು ತಿಳಿಸಿದೆ. ಸರ್ಕಾರ ಮತದಾರರ ಮಾಹಿತಿ ಕಲೆ ಹಾಕಿದ ಖಾಸಗಿ ಸಂಸ್ಥೆ ವಿರುದ್ಧ ತನಿಖೆಗ ಆದೇಶಿಸಿದ್ದು, ಕಾಡುಗೋಡಿ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.