ಚನ್ನೈ: ತಮಿಳುನಾಡು ಕ್ರಿಕೆಟ್ ತಂಡವು ಊಹಿಸಲೂ ಅಸಾಧ್ಯವಾದುದನ್ನು ಸಾಧಿಸಿದೆ. ಹೌದು, ಐವತ್ತು ಓವರ್ ಗಳ ಪಂದ್ಯದಲ್ಲಿ 500ರನ್ ಗಳಿಸಿದ ವಿಶ್ವದ ಮೊದಲ ವೃತ್ತಿಪರ ಮಟ್ಟದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರುಣಾಚಲ ಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ಈ ಸಾಧನೆ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ತಮಿಳುನಾಡು ಎರಡು ವಿಕೆಟ್ ನಷ್ಟಕ್ಕೆ 506 ರನ್ ಗಳಿಸಿತು. ತಂಡದ ಪರ ಇಬ್ಬರು ಆರಂಭಿಕರು ದೊಡ್ಡ ಶತಕಗಳನ್ನು ಗಳಿಸಿದರು. ಆರಂಭಿಕ ಬ್ಯಾಟ್ಸ್ಮನ್ ಬಿ ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಗಳಿಸಿದರು. ಅವರು 19ಬೌಂಡರಿಗಳು ಮತ್ತು 2 ಸಿಕ್ಸರ್ ಗಳನ್ನು ಹೊಡೆದರು. ಇನ್ನೋರ್ವ ಆರಂಭಿಕ ಆಟಗಾರ ಎನ್ ಜಗದೀಶ್ ಕೂಡ ಅದ್ಭುತ ಫಾರ್ಮ್ನಲ್ಲಿದ್ದರು. ಅವರು 141 ಎಸೆತಗಳಲ್ಲಿ 277 ರನ್ ಗಳಿಸಿದರು. ಅವರು 25 ಬೌಂಡರಿ ಮತ್ತು 15 ಸಿಕ್ಸರ್ ಗಳನ್ನು ಹೊಡೆದರು.
ಎಂಟು ವಿಭಿನ್ನ ಬೌಲರ್ ಗಳನ್ನು ಅಖಾಡಕ್ಕೆ ಇಳಿಸಿದರು ಅರುಣಾಚಲ ಪ್ರದೇಶದ ಬೌಲರ್ ಗಳು ಸಂಪೂರ್ಣವಾಗಿ ತಮಿಳುನಾಡಿನ ಆಟಗಾರರ ಮುಂದೆ ಮಂಡಿ ಊರಿದರು. ಈ ಪಂದ್ಯವು ಕರ್ನಾಟಕದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.