ಬೆಂಗಳೂರು: ಪಿಂಚಣಿ ಮಾಡಿಸೋ ನೆಪದಲ್ಲಿ ವೃದ್ದೆಯರಿಂದ ಸರ ಅಪಹರಿಸುತ್ತಿದ್ದ ವಂಚಕನನ್ನು ಪೋಲಿಸರು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ತಿಲಕ್ ನಗರದ ಅಬ್ದುಲ್ ಅಂತ ತಿಳಿದು ಬಂದಿದೆ.
ಬಂಧೀತ ಆರೋಪಿ ಅಬ್ದುಲ್ ಒಂಟಿಯಾಗಿ ಹೋಗುವ ವೃದ್ದೆಯರನ್ನು ಪರಿಚಯ ಮಾಡಿಕೊಂಡು ಅವರಿಗೆ ಆಧಾರ್ ಕಾರ್ಡ್, ಪಿಂಚಣಿ ಮಾಡಿಸಿಕೊಡ್ತಿನಿ ಅಂತ ನಂಬಿಸಿ ಅವರ ಬಳಿ ಇದ್ದ ವಡವೆ ಕಣ್ಣು ಹಾಕಿ ತೆಗೆದುಕೊಂಡು ತೆಗೆದುಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಅಂದ ಹಾಗೇ ಈ ಆರೋಪಿ ವಿರುದ್ದ ಈ ಹಿಂದೆ 12ಕ್ಕೂ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೋಲಿಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.