ಕಾರವಾರ: ಜೀವನದಲ್ಲಿ ಅಹಂಕಾರವನ್ನು ಬದಿಗೊತ್ತಿದಾಗಲೇ ಯಶಸ್ಸು ಸಾಧ್ಯ. ಭಗವದ್ಗೀತೆಯನ್ನು ಕೃಷ್ಣ , ಅರ್ಜುನನಿಗೆ ಬೋಧಿಸಿದ ಸಂದರ್ಭವನ್ನು ವಿವರಿಸಿ, ಇಂದಿನ ವರ್ತಮಾನಕ್ಕೆ ಭಗವದ್ಗೀತೆ ಹೇಗೆ ಪ್ರಸ್ತುತಎಂಬುದನ್ನು ವಿವರಿಸುತ್ತಾ , ಜೀವನದಲ್ಲಿ ಭಕ್ತಿ ಎಂಬುದು ಎಷ್ಟು ಮುಖ್ಯ ಹಾಗೂ ಅದು ಕ್ರೀಡೆಗೆ ಹೇಗೆ ಅನ್ವಯವಾಗುತ್ತದೆ ಎಂದು ಹೊನ್ನಾವರರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ್ಕಲ್ಯಾಣ್ಪುರ್ ಹೇಳಿದರು.
ಅವರು ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ನಡೆದ ಪಾಲಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಭಾಷಣದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಮನುಷ್ಯನಜೀವನದ ಅವಿಭಾಜ್ಯ ಅಂಗ. ದೈಹಿಕಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ ಅಂಥ ತಿಳಿಸಿದರು.
ವಿದ್ಯಾರ್ಥಿಗಳು ಸಮಾಜಮುಖಿಯಾಗಿರಬೇಕು.
ಇನ್ನೂ ಸಮಾಜಕ್ಕೆ Àಏನನ್ನು ಕೊಡಲು ಸಾಧ್ಯ ಎಂಬುದನ್ನು ಅರಿತಿರಬೇಕು. ಅಲ್ಲದೆ ಪಾಲಕರು ಸಹ ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಬೆಳೆಯಲು ಅನುಕೂಲವನ್ನು ಮಾಡಬೇಕುಎಂದು ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿಭಟ್ ಹೇಳಿದರು. ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದು. ಕ್ರೀಡೆ ಮನುಷ್ಯನಆರೋಗ್ಯಕ್ಕೆ ಮಹತ್ವವಾದದ್ದು. ಪ್ರಾಂಶುಪಾಲರಾಧ ಕಾಂತಿ ಭಟ್ರವರು ಪಾಲಕರ ಕ್ರೀಡಾಕೂಟದಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಮಹೇಶ್ಕಲ್ಯಾಣ್ಪುರ್ಅವರ ವಿಶೇಷ ಸಾದನೆ ಹಾಗೂ ಸಮಾಜಮುಖಿ ಕೆಲಸವನ್ನು ಗಮನಿಸಿ ಅವರನ್ನುಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ನಾಗರಾಜಕಾಮತ್, ಕಾರ್ಯದರ್ಶಿಗಳಾದ ಎಸ್.ಎಂ. ಭಟ್,ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ, ಖಜಾಂಚಿ ಉಮೇಶ ನಾಯ್ಕ, ನಿರ್ದೇಶಕರಾದ ಎಂ.ಜಿ.ಹೆಗಡೆ, ಸಿ.ಇ.ಒ ಕಿರಣ್ಕುಡ್ತಾರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ಪಾಲಕರಿಗಾಗಿ ವೈಯಕ್ತಿಕ ಮತ್ತು ಗುಂಪು ಆಟಗಳನ್ನು ನಿಯೋಜಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಪಾಲಕರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕಿಯಾದ ಸಂಜಾತಾ ಭಟ್ ಪ್ರಾರ್ಥಿಸಿದರು. ಶ್ವೇತಾಎನ್. ಸ್ವಾಗತಿಸಿದರು ವಿಜಯಲಕ್ಷಿö್ಮÃ ನಾಯ್ಕ ವಂದಿಸಿದರು. ಕೇಶವ್ಗೌಡಕಾರ್ಯಕ್ರಮವನ್ನು ನಿರೂಪಿಸಿದರು.