ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಜಾವಾ ದ್ವೀಪದಲ್ಲಿ ಸೋಮವಾರ ಭಾರಿ ಭೂಕಂಪ ಸಂಭವಿಸಿದೆ. ಸಾಸಿಯಾಜೂರ್ ಪ್ರದೇಶದಲ್ಲಿ 49 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಈ ಭೂಕಂಪದಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.9 ರಿಂದ 5.6 ರ ನಡುವೆ ಇತ್ತು. ಭೂಕಂಪದಿಂದಾಗಿ ಸಾವಿರಾರು ಮನೆಗಳು ಬುಡಸಮೇತ ಕಿತ್ತುಹೋಗಿವೆ. ಕಟ್ಟಡಗಳು ಕುಸಿಸಿದ್ದು, ಒಂದು ಶಾಲೆ ನಾಶವಾಗಿದೆ. ಜನರು ಭಯಭೀತರಾಗಿ ರಸ್ತೆಗಳಿಗೆ ಧಾವಿಸಿದ್ದಾರೆ. ಜಾಗೃತ ಅಧಿಕಾರಿಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನ ಪ್ರಾರಂಭಿಸಿದರು. ಇನ್ನೂ ಕೆಲವರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆಸ್ತಿಗೆ ಭಾರಿ ಹಾನಿ ಸಂಭವಿಸಿರಬಹುದು ಎಂದು ನಂಬಲಾಗಿದೆ.
‘ನಾನು ಜೈಲಿಗೆ ಹೋದರೆ ಸಚಿವ ಅಶ್ವಥ್ ನಾರಾಯಣರನ್ನು ಅಲ್ಲೇ ಭೇಟಿಯಾಗುವೆ’ : ಡಿ.ಕೆ ಶಿವಕುಮಾರ್
‘ನಾನು ಜೈಲಿಗೆ ಹೋದರೆ ಸಚಿವ ಅಶ್ವಥ್ ನಾರಾಯಣರನ್ನು ಅಲ್ಲೇ ಭೇಟಿಯಾಗುವೆ’ : ಡಿ.ಕೆ ಶಿವಕುಮಾರ್