ನವದೆಹಲಿ : ಇನ್ನೂ ಕೆಲವೇ ದಿನಗಳಲ್ಲಿ ನವೆಂಬರ್(November) ತಿಂಗಳು ಮುಗಿದು ಡಿಸೆಂಬರ್ ತಿಂಗಳಿಗೆ ಕಾಲಿಡಲಿದ್ದೇವೆ. ಈ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಅನ್ನು 12 ದಿನಗಳವರೆಗೆ ಮುಚ್ಚಲಾಗುವುದು. ಈ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಡಿಸೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕುಗಳು ರಾಜ್ಯವನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳನ್ನು ಹೊಂದಿರುತ್ತವೆ. ಪ್ರಾದೇಶಿಕ ರಜಾದಿನಗಳನ್ನು ಸಂಬಂಧಪಟ್ಟ ರಾಜ್ಯದ ಸರ್ಕಾರವು ನಿರ್ಧರಿಸುತ್ತದೆ.
ಡಿಸೆಂಬರ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
ಡಿಸೆಂಬರ್ 3- ಶನಿವಾರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ
ಡಿಸೆಂಬರ್ 4- ಭಾನುವಾರ ಭಾರತದಾದ್ಯಂತ ವಾರಾಂತ್ಯದ ಬ್ಯಾಂಕ್ ರಜೆ
ಡಿಸೆಂಬರ್ 10 ಶನಿವಾರ ಭಾರತದಾದ್ಯಂತ ತಿಂಗಳ ಎರಡನೇ ಶನಿವಾರ
ಡಿಸೆಂಬರ್ 11 ಭಾನುವಾರದಂದು ಭಾರತದಾದ್ಯಂತ ವಾರಾಂತ್ಯದ ಬ್ಯಾಂಕ್ ರಜೆ
ಡಿಸೆಂಬರ್ 12 ಸೋಮವಾರ ಪಾ-ತೋಗನ್ ನೆಂಗ್ಮಿಂಜ ಸಂಗ್ಮಾ ಮೇಘಾಲಯ
ಡಿಸೆಂಬರ್ 18 ಭಾನುವಾರ ಭಾರತದಾದ್ಯಂತ ವಾರಾಂತ್ಯದ ಬ್ಯಾಂಕ್ ರಜೆ
24 ಡಿಸೆಂಬರ್ ಶನಿವಾರ ಕ್ರಿಸ್ಮಸ್ ಹಬ್ಬ ಮತ್ತು ನಾಲ್ಕನೇ ಶನಿವಾರ ಭಾರತದಾದ್ಯಂತ
ಡಿಸೆಂಬರ್ 25 ಭಾನುವಾರ ಭಾರತದಾದ್ಯಂತ ವಾರಾಂತ್ಯದ ಬ್ಯಾಂಕ್ ರಜೆ
ಡಿಸೆಂಬರ್ 26 ಸೋಮವಾರ ಕ್ರಿಸ್ಮಸ್ ಆಚರಣೆ
ಡಿಸೆಂಬರ್ 29 ಗುರುವಾರ ಗುರು ಗೋವಿಂದ್ ಸಿಂಗ್ ಜಿ ಜನ್ಮದಿನ
ಡಿಸೆಂಬರ್ 30 ಶುಕ್ರವಾರ ಯು ಕಿಯಾಂಗ್ ನಂಗ್ಬಾ ಮೇಘಾಲಯ
ಡಿಸೆಂಬರ್ 31 ಶನಿವಾರ ಹೊಸ ವರ್ಷದ ಮುನ್ನಾದಿನ ಬ್ಯಾಂಕ್ ಗಳಿಗೆ ರಜೆ