ಚೆನ್ನೈ: ಯೋಗದಿಂದ ರೋಗಕ್ಕೆ ಮುಕ್ತಿ ಎಂದು ಅನಾದಿ ಕಾಲದಿಂದಲೂ ಗುರು-ಹಿರಿಯರು ಕೇಳುತ್ತ ಬಂದಿದ್ದೇವೆ. ಹಳೆಯ ವ್ಯಾಯಾಮಗಳ ವೈಖರಿಗೆ ಜಿಮ್ ಕೇಂದ್ರಗಳು ಆಧುನಿಕತೆ ಟೆಚ್ ಕೊಟ್ಟಿವೆ. ಹೊಸ ಟ್ರೆಂಡಿಂಗ್’ಗೆ ಒಗ್ಗಿಕೊಂಡಿರುವ 56 ವರ್ಷದ ಮಹಿಳೆಯ ಸೋಷಿಯಲ್ ಮೀಡಿಯಾದಲ್ಲಿ ಹಲ್-ಚಲ್ ಎಬ್ಬಿಸಿದ್ದಾರೆ.
BIGG NEWS : ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆ, ಡಿಜಿಪಿ ಅಲೋಕ್ ಕುಮಾರಿಂದ ಮಹತ್ವದ ಮಾಹಿತಿ
52ನೇ ವಯಸ್ಸಿನಲ್ಲಿ ತಮ್ಮ ಸೊಸೆಯ ಜೊತೆಗೆ ಜಿಮ್ ಸೆಂಟರ್’ಗೆ ಹೋದ ಮಹಿಳೆಯು ಸೊಸೆಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾರೆ. ಆ ಮೂಲಕ ಜಿಮ್ ಕೇಂದ್ರದಲ್ಲಿ ಮಹಿಳೆಯರಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ.
BIGG NEWS : ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆ, ಡಿಜಿಪಿ ಅಲೋಕ್ ಕುಮಾರಿಂದ ಮಹತ್ವದ ಮಾಹಿತಿ
ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಜಂಟಿಯಾಗಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 56 ವರ್ಷದ ಮಹಿಳೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವುದು ಕಂಡು ಬಂದಿದೆ. ಇದೇ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
52ನೇ ವಯಸ್ಸಿನಲ್ಲಿ ಮೊದಲು ಜಿಮ್ ವರ್ಕೌಟ್
View this post on Instagram
ಚೆನ್ನೈ ಮೂಲಕ ಮಹಿಳೆಯು ತಮ್ಮ 52ನೇ ವಯಸ್ಸಿನಲ್ಲಿ ಸಹಜವಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ಕಾಲು ನೋವು, ಮಂಡಿ ನೋವಿನಿಂದ ಬಳಲುತ್ತಿದ್ದ ಮಹಿಳೆಯು ಮುಂದೆ ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ. ಈ ಕುರಿತು ಮಗನಲ್ಲಿ ಸಲಹೆ ಕೇಳಿದಾಗ ವ್ಯಾಯಾಮ ಮಾಡುವಂತೆ ಸಲಹೆ ಕೊಟ್ಟಿದ್ದಾನೆ.
BIGG NEWS : ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆ, ಡಿಜಿಪಿ ಅಲೋಕ್ ಕುಮಾರಿಂದ ಮಹತ್ವದ ಮಾಹಿತಿ
ಮಗನ ಮಾತಿನಂತೆ ನಡೆದುಕೊಂಡ ಮಹಿಳೆಯು ತನ್ನ ಸೊಸೆಯ ಜೊತೆಗೆ ಜಿಮ್ ಕೇಂದ್ರಕ್ಕೆ ಸೇರಿಕೊಂಡಿದ್ದಾರೆ. ಅಂದಿನಿಂದ ಜಿಮ್ ಕೇಂದ್ರದಲ್ಲಿ ಭಾರವಾದ ತೂಕ ಮತ್ತು ಡಂಬ್ಬೆಲ್ಸ್ ಮತ್ತು ಇತರ ಹಲವಾರು ಜಿಮ್ ಯಂತ್ರಗಳು ಮತ್ತು ಸಲಕರಣೆಗಳನ್ನು ಎತ್ತುವುದನ್ನು ರೂಢಿಸಿಕೊಂಡಿದ್ದಾರೆ. ಆ ಮೂಲಕ 56 ವರ್ಷದ ಮಹಿಳೆಯೊಬ್ಬರು ಆರೋಗ್ಯದ ಸವಾಲುಗಳ ನಡುವೆಯೂ ತನ್ನನ್ನು ಹೇಗೆ ಫಿಟ್ ಆಗಿಟ್ಟುಕೊಳ್ಳುತ್ತಾರೆ ಎಂಬುದರ ಕುರಿತು ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.
BIGG NEWS : ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆ, ಡಿಜಿಪಿ ಅಲೋಕ್ ಕುಮಾರಿಂದ ಮಹತ್ವದ ಮಾಹಿತಿ
56ನೇ ವಯಸ್ಸಿನಲ್ಲೂ ಮಹಿಳೆಯು ತನ್ನ ಸೊಸೆಯೊಂದಿಗೆ ಪೈಪೋಟಿಗೆ ಬಿದ್ದಂತೆ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ವಿಡಿಯೋದ ಕೊನೆಯಲ್ಲಿ, ಜಿಮ್ನಲ್ಲಿರುವ ಇತರ ಮಹಿಳೆಯರೊಂದಿಗೆ ಸಿಬ್ಬಂದಿ ಸದಸ್ಯರು ಹಿರಿಯ ಮಹಿಳೆಯನ್ನು ಗೌರವಿಸಿದ್ದಾರೆ.