ನವದೆಹಲಿ: ನಾಯಿಗಳ ದಾಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ದಿನದಿಂದ ದಿನಕ್ಕೆ ನಾಯಿಗಳ ದಾಳಿಯ ಸುದ್ದಿ ಮಾತ್ರ ದಿನಕ್ಕೊಂದು ಬರುತ್ತಿದೆ.ಈ ನಡುವೆ ಗಾಜಿಯಾಬಾದ್ನ ವೈಶಾಲಿ ಪ್ರದೇಶದಲ್ಲಿ 11 ವರ್ಷದ ಬಾಲಕಿಯೊಬ್ಬಳು ಗೆ ಬೀದಿನಾಯಿಗಳಿಂದ ದಾಳಿಗೊಳಗಾದ ಘಟನೆ ನಡೆದಿದ್ದು, ಇಡೀ ಘಟನೆ ಸೊಸೈಟಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ವಿಡಿಯೋದಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ಹುಡುಗಿಯ ಮೇಲೆ ಮೂರು ನಾಯಿಗಳು ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಆಕೆ ತನ್ನನ್ನು ರಕ್ಷಿಸಿಕೊಳ್ಳಲು ಸೊಸೈಟಿ ಆವರಣಕ್ಕೆ ಓಡುವಷ್ಟರಲ್ಲಿ ನಾಯಿಯೊಂದು ಆಕೆಯ ಕಾಲಿಗೆ ಕಚ್ಚಿದೆ. ಮೂಲಗಳ ಪ್ರಕಾರ, ಸಂತ್ರಸ್ತೆಯ ಹೆಸರು ರಾಮಪ್ರಸ್ಥ ಸೊಸೈಟಿಯ ನಿವಾಸಿ ವಿಭೋರ್ ಗುಪ್ತಾ ಅವರ ಮಗಳು ಭವ್ಯಾ ಗುಪ್ತಾ ಎನ್ನಲಾಗಿದ್ದು, ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆಯನ್ನು ನೀಡಲಾಗಿದೆ ಎನ್ನಲಾಗಿದೆ.
गाजियाबाद के इंदिरापुरम इलाके में कुत्ते के काटने का एक नया मामला सामने आया है।
रामप्रस्था सोसाइटी निवासी 11 वर्षीय बच्ची को कुत्तों के झुंड ने दौड़ाकर काटा है…@ghaziabadpolice #ghaziabad #dog pic.twitter.com/aslbMyU8Ze
— Himanshu Purohit (@Himansh256370) November 20, 2022