ಗಾಂಧಿನಗರ (ಗುಜರಾತ್) : ಮುಂದಿನ ತಿಂಗಳು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಇಂದು ಮೂರು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ಮೊದಲ ರ್ಯಾಲಿಯು ಸುರೇಂದ್ರನಗರದಲ್ಲಿ ನಡೆಯಲಿದೆ. ನಂತ್ರ, 1 ಗಂಟೆಗೆ ಜಬುಸರ್ನಲ್ಲಿ ಮತ್ತು ಮಧ್ಯಾಹ್ನ 3 ರ ಸುಮಾರಿಗೆ ನವಸಾರಿಯಲ್ಲಿ ನಡೆಯಲಿದೆ.
ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯದ ದ್ವಾರಕಾ, ಸೋಮನಾಥ್, ಜುನಾಗಢ ಮತ್ತು ಕಛ್ ಜಿಲ್ಲೆಗಳಲ್ಲಿ ನಾಲ್ಕು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ದ್ವಾರಕಾ ಜಿಲ್ಲೆಯ ಖಂಬಲಿಯಾ ವಿಧಾನಸಭಾ ಕ್ಷೇತ್ರದಲ್ಲಿ ಶಾ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಕೋಡಿನಾರ್ನಲ್ಲಿರುವ ಸೋಮನಾಥದಲ್ಲಿ ಮತ್ತೊಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶಾ ಭಾಗಿಯಾಗುವ ಇನ್ನೆರಡು ಸಭೆಗಳು ಕ್ರಮವಾಗಿ ಜುನಾಗಢ್ನ ಮಂಗ್ರೋಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಕಛ್ನ ಭುಜ್ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಮತ್ತು 4 ಗಂಟೆಗೆ ನಡೆಯಲಿವೆ.
ಗುಜರಾತ್ ಚುನಾವಣೆಯ ಬಿಜೆಪಿಯ ಸ್ಟಾರ್ ಪ್ರಚಾರಕರೂ ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹ್ಮದವಾಡ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
JOBS ALEART: KMF ನಿಂದ 487 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ಒಟ್ಟಿಗೆ ʻFIFA ವಿಶ್ವಕಪ್ʼ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದ ಕೇರಳದ ಫುಟ್ಬಾಲ್ ಅಭಿಮಾನಿಗಳು