ಕೊಚ್ಚಿ: ಫೀಫಾ ವಿಶ್ವಕಪ್(FIFA World Cup) 2022 ಹವಾ ಜೋರಾಗಿದೆ. ಇದೀಗ ಫುಟ್ಬಾಲ್ ಅಭಿಮಾನಿಗಳು ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಶುರು ಮಾಡಿದ್ದಾರೆ.
ಆದ್ರೆ, ಇಲ್ಲೊಂದು ಕೇರಳದ 17 ಫುಟ್ಬಾಲ್ ಅಭಿಮಾನಿಗಳ ಗುಂಪು ಒಟ್ಟಾಗಿ ಪಂದ್ಯಗಳನ್ನು ವೀಕ್ಷಿಸಲು ಮನೆಯೊಂದನ್ನು 23 ಲಕ್ಷ ರೂ. ಕೊಟ್ಟು ಖರೀದಿಸಿದೆ.
ಹೌದು, ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಎಂಬ ಸಣ್ಣ ಹಳ್ಳಿಯ 17 ಮಂದಿ ನಿವಾಸಿಗಳು ಫುಟ್ಬಾಲ್ ಪಂದ್ಯಗಳನ್ನು ಒಟ್ಟಾಗಿ ವೀಕ್ಷಿಸಲು 23 ಲಕ್ಷ ರೂ. ಕೊಟ್ಟು ಮನೆ ಖರೀದಿಸಿದೆ. ಇದೀಗ ಇವರೆಲ್ಲರೂ ಒಂದೇ ಸೂರಿನಡಿ ಆಟಗಳನ್ನು ವೀಕ್ಷಿಸಬಹುದಾಗಿದೆ. ಕಳೆದ 15-20 ವರ್ಷಗಳಿಂದ ಒಟ್ಟಿಗೇ ಕೂತು ಫುಟ್ಬಾಲ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತಿರುವ ಇವರು, ಈ ಬಾರಿ ಮನೆಯನ್ನೇ ಖರೀದಿಸಿದೆ.
ಹೊಸದಾಗಿ ಖರೀದಿಸಿದ ಮನೆಗೆ ವಿಶ್ವಕಪ್ನಲ್ಲಿ ಭಾಗವಹಿಸುವ 32 ತಂಡಗಳ ಜೊತೆಗೆ, ಫುಟ್ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಸೇರಿದಂತೆ ಆಟದ ಕೆಲವು ಸಕ್ರಿಯರ ಭಾವಚಿತ್ರಗಳೊಂದಿಗೆ ಅಲಂಕರಿಸಿದ್ದಾರೆ ಮತ್ತು ಪಂದ್ಯ ವೀಕ್ಷಿಸಲು ದೂರದರ್ಶನದ ದೊಡ್ಡ ಪರದೆಯನ್ನು ಅಳವಡಿಸಿದ್ದಾರೆ.
FIFA ವಿಶ್ವಕಪ್ 2022 ಕತಾರ್ನಲ್ಲಿನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ನಡೆಯಲಿದೆ.