ನವದೆಹಲಿ: ಆಗ್ನೇಯ ದಿಲ್ಲಿಯ ಡಾನ್ ಬಾಸ್ಕೋ ತಾಂತ್ರಿಕ ಸಂಸ್ಥೆಯ ಸುಮಾರು 25 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗರ್ಭಿಣಿ ಬೀದಿ ನಾಯಿಯನ್ನು ಹಿಂಸಿಸಿ, ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪಾರ್ಕ್ನಲ್ಲಿ ನಡೆದ ನಾಯಿಯ ಭೀಕರ ಹತ್ಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿದೆ. ದೂರಿನ ಪ್ರಕಾರ, ಹಿರಿಯ ಸಿಬ್ಬಂದಿಯ ಆದೇಶದ ಮೇರೆಗೆ ನಾಯಿಯನ್ನು ಕೊಲ್ಲಲಾಗಿದೆ.
ವಿಡಿಯೋದಲ್ಲಿ, ಕ್ಯಾಂಪಸ್ನ ಟಿನ್ ಶೆಡ್ನೊಳಗೆ ನಾಯಿ ಭಯದಿಂದ ಅವಿತು ಕುಳಿತಿದೆ. ನಾಯಿಯನ್ನು ಹೊಡೆಯುವ ಸಲುವಾಗಿ ವಿದ್ಯಾರ್ಥಿಯೊಬ್ಬ ರಾಡ್ ಹಿಡಿದುಕೊಂಡು ಹೊರಗೆ ಕಾಯುತ್ತಿದ್ದಾನೆ. ಇತ್ತ ಇನ್ನುಳಿದ ವಿದ್ಯಾರ್ಥಿಗಳು ಹೊರಗಿನಿಂದ ಅವನನ್ನು ಹುರಿದುಂಬಿಸುತ್ತಿರುವುದನ್ನು ನೋಡಬಹುದು.
Group of 20 students of Don Bosco technical institute Zakir nagar killed a pregnant dog ,no action taken till now @DCPSEastDelhi @CPDelhi pic.twitter.com/JM1ten2Oyz
— Tajinder Pal Singh Bagga (@TajinderBagga) November 19, 2022
ಪ್ರಾಣಿಗಳ ಚಿತ್ರಹಿಂಸೆ ಮತ್ತು ಹತ್ಯೆಯನ್ನು ಚಿತ್ರಿಸುವ 15 ನಿಮಿಷಗಳ ಅವಧಿಯ ವೀಡಿಯೊ ಶನಿವಾರ ವೈರಲ್ ಆಗಿದೆ. ಕಾರ್ಯಕರ್ತರು ಮತ್ತು ಶ್ವಾನ ಪ್ರೇಮಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Rain in Karnataka : ಚಳಿಯಿಂದ ತತ್ತರಿಸಿರುವ ಜನತೆಗೆ ಶಾಕ್ : ರಾಜ್ಯದಲ್ಲಿ ನಾಳೆಯಿಂದ ಮತ್ತೆ ಮಳೆ ಶುರು!
BIGG NEWS : ಮುಂದೊಂದು ದಿನ ಅವಕಾಶ ಬಂದ್ರೆ ಶ್ರೀರಾಮುಲು ಕೂಡ ಮುಖ್ಯಮಂತ್ರಿ ಆಗ್ತಾನೆ : ಸಿಎಂ ಬೊಮ್ಮಾಯಿ
Rain in Karnataka : ಚಳಿಯಿಂದ ತತ್ತರಿಸಿರುವ ಜನತೆಗೆ ಶಾಕ್ : ರಾಜ್ಯದಲ್ಲಿ ನಾಳೆಯಿಂದ ಮತ್ತೆ ಮಳೆ ಶುರು!