ಚಿಕ್ಕಮಗಳೂರು : ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.. ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ. ಚಿನ್ನದ ವ್ಯಾಪಾರಿಯನ್ನು ಬೆದರಿಸಿದ ಪೊಲೀಸರು 5 ಲಕ್ಷ ದರೋಡೆ ಮಾಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಬಯಲಿಗೆ ಬಂದಿದೆ.ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬುವವರ ಪುತ್ರ ರೋಹಿತ್ ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ.
ಭಗವಾನ್ ಪುತ್ರ ರೋಹಿತ್ 2 ಕೆಜಿ ಚಿನ್ನವನ್ನು ಬೇಲೂರಿನ ವರ್ತಕರಿಗೆ ನೀಡಲು ಹೋಗುವಾಗ ಪೊಲೀಸರು 10 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ, ಆಗ ಭಗವಾನ್ ಇದಕ್ಕೆ ಸಂಬಂಧಪಟ್ಟ ಕಾನೂನು ಬದ್ದ ದಾಖಲೆಗಳನ್ನು ನೀಡಿದರೂ ಕೂಡ ಪೊಲೀಸರು ಹಣಕ್ಕೆ ಒತ್ತಾಯಿಸಿದ್ದಾರೆ, ಪೊಲೀಸರ ಒತ್ತಾಯಕ್ಕೆ ಮಣಿದ ರೋಹಿತ್ ಕೊನೆಗೆ 5 ಲಕ್ಷ ನೀಡಿದ್ದಾರೆ ಎನ್ನಲಾಗಿದೆ.ಭಗವಾನ್ ನೀಡಿದ ದೂರಿನ ಮೇರೆಗೆ ಪೊಲೀಸ್ ಸಿಬ್ಬಂದಿ ಧನಪಾಲ್, ಓಂಕಾರ ಮೂರ್ತಿ, ಶರತ್ ರಾಜ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
BIGG NEWS : 6 ತಿಂಗಳ ನಂತ್ರ ‘ಚೀನಾ’ದಲ್ಲಿ ಕೊರೊನಾ ವೈರಸ್’ಗೆ ಮೊದಲ ಬಲಿ, ‘ಡ್ರ್ಯಾಗನ್’ಗೆ ಆತಂಕವೋ ಆತಂಕ
BREAKING NEWS : ಮಾಜಿ ಶಾಸಕ ‘ಯು.ಬಿ ಬಣಕಾರ್’ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ