ಒಂಟಾರಿಯೊ : ನವೆಂಬರ್ 19ರಂದು ಕೆನಡಾದ ಒಂಟಾರಿಯೊದ ಮೇಲೆ ಒಂದು ಮೀಟರ್ಗಿಂತ ಕಡಿಮೆ ವ್ಯಾಸದ ಫೈರ್ಬಾಲ್ (ಬೆಂಕಿಚೆಂಡು) ಕಂಡುಬಂದಿದೆ. ಇನ್ನೀದು ಭೂಮಿಯೊಂದಿಗೆ ಪರಿಣಾಮ ಬೀರುವ ಮೊದಲು ಬಾಹ್ಯಾಕಾಶದಲ್ಲಿ ಪತ್ತೆಯಾದ 6ನೇ ವಸ್ತುವಾಗಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ತಿಳಿಸಿದೆ.
ಇನ್ನು ಪದೇ ಪದೇ ಭೂಮಗೆ ಭೀಳ್ತಿರುವ ಬೆಂಕಿ ಚಂಡುಗಳು ಕ್ಷುದ್ರಗ್ರಹ ನೀಡುವ ಎಚ್ಚರಿಕೆಯಾಗಿದೆ ಎಂದು ಹೇಳಲಾಗ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಕಾಶದಿಂದ ಬೀಳುತ್ತಿರುವ ಫೈರ್ಬಾಲ್ ನೋಡಲು ಸುಂದರವಾಗಿದ್ದು, ಈ ವಿಡಿಯೋವನ್ನ ಇಎಸ್ಎ ಹಂಚಿಕೊಂಡಿದೆ.
ಈ ನಡುವೆ ವೃತ್ತಿಪರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞರು ಶನಿವಾರ (ಸ್ಥಳೀಯ ಸಮಯ) ಮುಂಜಾನೆ ಉಲ್ಕೆಯೊಂದು ತನ್ನ ದಾರಿಯಲ್ಲಿ ಸಾಗುತ್ತಿದೆ ಎಂದು ಚರ್ಚಿಸಲು ಪ್ರಾರಂಭಿಸಿದ್ದಾರೆ. ಇನ್ನು ಈ ದೃಶ್ಯವನ್ನ ವೀಕ್ಷಿಸಲು ವೀಕ್ಷಕರು ತಮ್ಮ ದೂರದರ್ಶಕಗಳು ಮತ್ತು ಕ್ಯಾಮೆರಾಗಳನ್ನ ಸ್ಥಾಪಿಸಬೇಕು ಎಂದು ಅವ್ರು ಹೇಳಿದ್ದಾರೆ.
~1-m space object – temporary designation #C8FF042 – strikes Earth over Canada, creating stunning #fireball☄️
For only the 6th time in history, this impact was predicted.
Find out more about predicting #asteroid impacts from the last time this happened 👉https://t.co/zwPKXeUEUl https://t.co/XbDqtiDuom pic.twitter.com/5yHGWibSki
— ESA Operations (@esaoperations) November 19, 2022