ಬೆಂಗಳೂರು: ಮಂಗಳೂರಿನಲ್ಲಿ ಶನಿವಾರ ಸಂಭವಿಸಿದ ಆಟೋ ರಿಕ್ಷಾದಲ್ಲಿ ಸ್ಪೋಟಕ್ಕೆ ಸಂಬಂಧಿಸಿದಂತೆ ಪ್ರೇಮರಾಜ್ ಗೂ ಸ್ಪೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಜಿಪಿ ಪ್ರವೀಣ್ ಸೂದ್, ಪ್ರೇಮರಾಜ್ ಒಬ್ಬ ಸಂತ್ರಸ್ತನಷ್ಟೇ, ಆತನಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಪ್ರೇಮ್ ರಾಜ್ ತನ್ನ ಗುರುತಿನ ಚೀಟಿ ಕಳೆದುಕೊಂಡಿದ್ದಾನೆ. ಇದರಿಂದ ಆತ ಪ್ರಕರಣದ ಬಲಿಪಶುವಾಗಿದ್ದೇನೆ, ಆದ್ದರಿಂದ ಆತನಿಗೂ ಸ್ಪೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ಸ್ಪೋಟ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಗಾಯಾಳು ಬಳಿ ಸಿಕ್ಕಿದ್ದ ಆಧಾರ್ ಕಾರ್ಡ್ ನಲ್ಲಿ ಪ್ರೇಮ್ ರಾಜ್ ಹುಟಗಿ ಹೆಸರಿತ್ತು, ಈ ಹಿನ್ನೆಲೆ ತನಿಖೆ ನಡೆಸಿದಾಗ ಅದು ನಕಲಿ ಎಂಬುದು ಗೊತ್ತಾಗಿತ್ತು. ಪ್ರೇಮರಾಜ್ ಗೂ ಸ್ಪೋಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದು, ಪ್ರೇಮ್ ರಾಜ್ ಕುಟುಂಬದವರು ನಿಟ್ಟುಸಿರು ಬಿಡುವಂತಾಗಿದೆ.
Mangalore blast case; Premraj is a victim of identity theft. It’s confirmed. He has nothing to do with this incident.
— DGP KARNATAKA (@DgpKarnataka) November 20, 2022
BIGG NEWS : ‘PFI’ ನಿಷೇಧಕ್ಕೆ ಪ್ರತೀಕಾರವಾಗಿ ಮಂಗಳೂರು ಆಟೋ ಸ್ಪೋಟ : ಪೊಲೀಸರಿಂದ ತೀವ್ರ ತನಿಖೆ
SBI Banking Update: WhatsApp ಮೂಲಕ ʻಹಾಯ್ʼ ಹೇಳಿ ನಿಮ್ಮ ʻಪಿಂಚಣಿ ಸ್ಲಿಪ್ʼ ಪಡೆಯಿರಿ! ಅದೇಗೆ ಅಂತಾ ಇಲ್ಲಿ ನೋಡಿ