ಮಂಗಳೂರು : ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣದಲ್ಲಿ ಶಿವಮೊಗ್ಗದ ಶಂಕಿತ ಉಗ್ರ ಶಾರಿಕ್ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗೆ ಕಾಶ್ಮೀರದ ಅನಂತನಾಗ್ನಲ್ಲಿ ಎನ್ಕೌಂಟರ್: ಎಲ್ಇಟಿ ಹೈಬ್ರಿಡ್ ಉಗ್ರ ಉಡೀಸ್
ಮಂಗಳೂರು ಆಟೋ ರಿಕ್ಷಾ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಮಂಗಳೂರು ಸ್ಪೋಟದಲ್ಲಿ ಶಿವಮೊಗ್ಗದ ಶಂಕಿತ ಉಗ್ರ ಶಾರಿಕ್ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಶಕಿಂತ ಉಗ್ರ ಶಾರಿಕ್ ಕೆಲ ದಿನಗಳ ಹಿಂದೆ ಶಿವಮೊಗ್ಗದಿಂದ ನಾಪತ್ತೆಯಾಗಿದ್ದಾನೆ. ಸದ್ಯ ಮಂಗಳೂರು ಆಟೋ ಸ್ಪೋಟದಲ್ಲಿ ಗಾಯಗೊಂಡಿರುವ ಗಾಯಾಳು ಶಂಕಿತ ಉಗ್ರ ಶಾರಿಕ್ ಎನ್ನಲಾಗುತ್ತಿದ್ದು, ಗಾಯಾಳುವಿನ ಮುಖ ಸಂಪೂರ್ಣ ಸುಟ್ಟು ಹೂಗಿರುವ ಹಿನ್ನೆಲೆಯಲ್ಲಿ ಶಾರಿಕ್ ಗುರುತು ಪತ್ತೆ ಹೆಚ್ಚಲು ಶಾರಿಕ್ ಕುಟುಂಬಸ್ಥರನ್ನು ಕರೆಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.