ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಹೈಬ್ರಿಡ್ ಭಯೋತ್ಪಾದಕನನ್ನು ಸೇನೆ ಹೊಡೆದುರುಳಿಸಿದೆ.
ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿರುವ ಚೆಕಿ ದುಡೂ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಭಾನುವಾರ ಮುಂಜಾನೆ ಸರ್ಚ್ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಭಯೋತ್ಪಾದಕರು ಮತ್ತು ಸೇನೆ ವಿರುದ್ಧ ಗುಂಡಿನ ದಾಳಿ ನಡೆಯಿತು. ದಾಳಿ ವೇಳೆ ಎಲ್ಇಟಿ ಸಜ್ಜದ್ ತಂತ್ರಾಯ್ನ ಹೈಬ್ರಿಡ್ ಭಯೋತ್ಪಾದಕನನ್ನು ಸೇನೆ ಹೊಡೆದುರುಳಿಸಿದೆ. ಮೃತ ಉಗ್ರನನ್ನು ಸಜ್ಜದ್ ತಂತ್ರಾಯ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕ ಸಜ್ಜದ್ ತಂತ್ರಾಯ್ ಈ ಹಿಂದೆ ಎಲ್ಇಟಿಯ ಭಯೋತ್ಪಾದಕ ಸಹಚರರಾಗಿದ್ದ ಮತ್ತು ಪಿಎಸ್ಎಯಿಂದ ಬಿಡುಗಡೆ ಹೊಂದಿದ್ದ. ಸಜ್ಜದ್ ನವೆಂಬರ್ 13 ರಂದು ಅನಂತನಾಗ್ನ ಬಿಜ್ಬೆಹರಾ, ರಾಖ್ಮೊಮೆನ್ನಲ್ಲಿ ಇಬ್ಬರು ಕಾಶ್ಮಿರೇತರ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದ. ಇದರಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲಿ ಒಬ್ಬ ಚಿಕಿತ್ಸೆ ಪಡೆಯುತ್ತಿದ್ದಾಗ ನವೆಂಬರ್ 18ರಂದು ಸಾವನ್ನಪ್ಪಿದನು.
BIGG NEWS : ನಾಗಾಲ್ಯಾಂಡ್ ಜೈಲಿನಿಂದ 9 ಮಂದಿ ಕೈದಿಗಳು ಎಸ್ಕೇಪ್… ಮುಂದುವರೆದ ಶೋಧ ಕಾರ್ಯಾ