ನವದೆಹಲಿ: ಪಾಸ್ವರ್ಡ್(Password) ಮತ್ತು OTP ಗಳನ್ನು ಇತರರಿಗೆ ಹೇಳುವುದು ಸೈಬರ್ ಅಪರಾಧದ ಪ್ರಮುಖ ಅಂಶವಾಗಿದೆ. ಅದಕ್ಕಾಗಿಯೇ ಪಾಸ್ವರ್ಡ್ಗಳನ್ನು ಆಗಾಗ್ಗೆ ಬದಲಾಯಿಸುವುದರಿಂದ ಕೆಲವು ಆನ್ಲೈನ್ ಹಗರಣಗಳನ್ನು ತಪ್ಪಿಸಬಹುದು. ಆದರೆ, ಪಾಸ್ವರ್ಡ್ ವಿಚಾರದಲ್ಲಿ ಭಾರತೀಯರು ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ತಿಳಿಸಲು ಸಂಸ್ಥೆಯೊಂದು ಪ್ರಕಟಿಸಿರುವ ಪಟ್ಟಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
NordPass ಕಂಪನಿಯ ಪ್ರಕಾರ, 2022 ರಲ್ಲಿ ಭಾರತೀಯರು ಹೆಚ್ಚು ಬಳಸಿದ ಪಾಸ್ವರ್ಡ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅನೇಕ ಜನರು ತಮ್ಮ ಪಾಸ್ವರ್ಡ್ಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ದುರ್ಬಲ ಪಾಸ್ವರ್ಡ್ಗಳನ್ನು ಬಳಸುತ್ತಾರೆ. ʻPasswordʼ ಎಂಬ ಪದವನ್ನೇ ಪಾಸ್ವರ್ಡ್ ಆಗಿ 34 ಲಕ್ಷ ಬಾರಿ ಪಾಸ್ವರ್ಡ್ ಆಗಿ ಬಳಸಲಾಗಿದೆ. ಈ ಪಟ್ಟಿಯಲ್ಲಿರುವ ಬಿಗ್ಬಾಸ್ಕೆಟ್ನ ಪಾಸ್ವರ್ಡ್ ಅನ್ನು ಕೇವಲ 5 ನಿಮಿಷಗಳಲ್ಲಿ ಭೇದಿಸಲಾಗಿದೆ. ಇದನ್ನು ಜನರು 75 ಸಾವಿರ ಬಾರಿ ಬಳಸಿದ್ದಾರೆ ಎಂಬುದು ಗಮನಾರ್ಹ.
♦Password
♦123456
♦12345678
♦bigbasket
♦123456789
♦pass@123
♦1234567890
♦anmol123
♦abcd1234
♦googledummy
ಈ ಪಾಸ್ವರ್ಡ್ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹಾಗಾಗಿ ಸುಲಭವಾಗಿ ನೆನಪಿಡುವ ಪಾಸ್ವರ್ಡ್ ಆಯ್ಕೆ ಮಾಡಿಕೊಳ್ಳುವುದು ಒಂದು ಹಂತವಾದರೆ, ಇತರರು ಸುಲಭವಾಗಿ ಊಹಿಸಲು ಪಾಸ್ವರ್ಡ್ ಗಳು ಇರಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಅಂತ್ಯ ಸಂಸ್ಕಾರದಲ್ಲಿ ಪ್ರೇಯಸಿಯನ್ನೇ ಮದುವೆಯಾದ ಪ್ರೇಮಿ…! ಎಲ್ಲಿ ಗೊತ್ತಾ?
BIG NEWS: ಉತ್ತರ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಟರ್ಕಿ: 6 ಮಂದಿ ಸಾವು, 80 ಕ್ಕೂ ಹೆಚ್ಚು ಜನರಿಗೆ ಗಾಯ
ಅಂತ್ಯ ಸಂಸ್ಕಾರದಲ್ಲಿ ಪ್ರೇಯಸಿಯನ್ನೇ ಮದುವೆಯಾದ ಪ್ರೇಮಿ…! ಎಲ್ಲಿ ಗೊತ್ತಾ?