ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಅವರು ತಿಳಿಸಿದ್ದಾರೆ.
BIGG NEWS : ಶೀಘ್ರವೇ `ಅಕ್ರಮ-ಸಕ್ರಮ, ಖಾತೆ ಅದಾಲತ್ ಮಾಡಲು ಕ್ರಮ : ಸಚಿವ ಸುಧಾಕರ್ ಭರವಸೆ
ಸದರಿ ಯೋಜನೆಯಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ (ನೀ), ಕಡಲೆ (ನೀ/ಮ.ಆ), ರಾಗಿ (ನೀ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ (ಶೇಂಗಾ) (ನೀ), ಭತ್ತ (ನೀ), ಸೂರ್ಯಕಾಂತಿ (ನೀ) ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ (ನೀ/ಮ.ಆ), ಜೋಳ (ನೀ/ಮ.ಆ), ಮೆಕ್ಕೆಜೋಳ (ನೀ/ಮ.ಆ) ಹುರುಳಿ (ಮ.ಆ), ಸೂರ್ಯಕಾಂತಿ (ನೀ/ಮ.ಆ) ರಾಗಿ (ನೀ), ಈರುಳ್ಳಿ (ನೀ), ಗೋದಿ (ಮ.ಆ) ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ (ನೀ), ಈರುಳ್ಳಿ (ನೀ)ನೆಲಗಡಲೆ (ಶೇಂಗಾ) (ನೀ), ಭತ್ತ (ನೀ), ರಾಗಿ (ನೀ) ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನ ಬೆಳೆಗಳಾದ-ಜೋಳ (ನೀ) ಡಿ.31, ಜೋಳ (ಮ) ಡಿ.15, ಮುಸುಕಿನ ಜೋಳ (ನೀ/ಮ.ಆ), ಕಡಲೆ (ನೀ/ಮ) ಡಿ.31, ಹುರುಳಿ(ಮ) ಡಿ.31, ಸೂರ್ಯಕಾಂತಿ (ನೀ/ಮ.ಆ) ಡಿ.16, ಗೋದಿ(ಮ.ಆ/ನೀ) ಡಿ.16, ಈರುಳ್ಳಿ(ನೀ) ನ.30, ಬೇಸಿಗೆ ಬೆಳೆಗಳಾದ ಭತ್ತ(ನೀ), ನೆಲಗಡಲೆ(ಶೇಂಗಾ)(ನೀ) ಸೂರ್ಯಕಾಂತಿ(ನೀ) & ಈರುಳ್ಳಿ(ನೀ) 2023ನೇ ಫೆ.28 ರಂದು ಬೆಳೆ ವಿಮೆ ಮಾಡಿಸಲು ಕೊನೆಯದಿನವಾಗಿರುತ್ತದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು (Common Service Centers) ಸಿ.ಎಸ್.ಸಿ ಟೋಲ್ ಫ್ರೀ ನಂಬರ್ : 08026-564535, ಟೋಲ್ ಫ್ರೀ ನಂಬರ್: 180042579, ಈಉI ವಿಮಾ ಕಂಪನಿ ಟೋಲ್ ಫ್ರೀ ನಂಬರ್: 18002664141 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೆÉೀರಿ ಹಾಗೂ ಸಂರಕ್ಷಣೆ ಪೋರ್ಟಲನ್ನು https://www.samrakshane.karnataka.gov.in ಸಂಪರ್ಕಿಸಬಹುದಾಗಿದೆ.