ಪಶ್ಚಿಮ ಬಂಗಾಳ: ಪಡಿತರ ಚೀಟಿಯಲ್ಲಿ ತನ್ನ ಹೆಸರಿನ ಬದಲಾಗಿ ʻಕುತ್ತಾʼ(ಹಿಂದಿಯಲ್ಲಿ ನಾಯಿ ಎಂದರ್ಥ) ಎಂದು ತಪ್ಪಾಗಿ ಮುದ್ರಣ ಮಾಡಿದ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಅಧಿಕಾರಿಯ ಮುಂದೆ ನಾಯಿಯಂತೆ ಬೊಗಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಶ್ರೀಕಾಂತಿ ದತ್ತಾ ಎಂಬ ವ್ಯಕ್ತಿ ಸರ್ಕಾರಿ ಅಧಿಕಾರಿಯ ಮುಂದೆ ನಾಯಿಯಂತೆ ಬೊಗಳುತ್ತಾ ಅವರ ದೂರನ್ನು ಗಮನಿಸುವಂತೆ ಕೇಳುತ್ತಿರುವುದನ್ನು ನೋಡಬಹುದು.
#West Bengal Shocker: Man Behaves Like Dog, ‘Barks’ at BDO After Bankura Administration Prints His Surname As ‘Kutta’ Instead of ‘Dutta’ in Ration Card pic.twitter.com/SqT0hs3iLr
— Kamlesh Kumar Ojha🇮🇳 (@Kamlesh_ojha1) November 19, 2022
ಬಂಕೂರಿನವರಾದ ಶ್ರೀಕಂಠಿ ದತ್ತಾ ಅವರ ಪಡಿತರ ಚೀಟಿಯಲ್ಲಿ ತಮ್ಮ ಹೆಸರನ್ನು ಒಂದಲ್ಲ ಮೂರು ಬಾರಿ ತಪ್ಪಾಗಿ ಮುದ್ರಿಸಲಾಗಿದೆ. ಮೂರನೇ ಬಾರಿ ಅವರ ಪಡಿತರ ಚೀಟಿಯಲ್ಲಿ ಶ್ರೀಕಂಠಿ ಕುತ್ತಾ ಎಂದು ಬರೆಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ತಪ್ಪಿನಿಂದ ಮಾನಸಿಕವಾಗಿ ನೊಂದಿದ್ದೇನೆ ಎಂದು ದತ್ತಾ ಹೇಳಿದ್ದಾರೆ.
“ನಾನು ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಮೂರನೇ ಬಾರಿ ನನ್ನ ಹೆಸರನ್ನು ಶ್ರೀಕಂಠಿ ದತ್ತ ಎಂದು ಬರೆಯುವ ಬದಲು ಶ್ರೀಕಂಠಿ ಕುತ್ತಾ ಎಂದು ಬರೆಯಲಾಗಿದೆ. ಇದರಿಂದ ನಾನು ಮಾನಸಿಕವಾಗಿ ತೊಂದರೆಗೀಡಾಗಿದ್ದೇನೆ” ಎಂದು ಹೇಳಿದ್ದಾರೆ.
SHOCKING NEWS: ಚಲಿಸುತ್ತಿದ್ದ ಕಾರಿನಲ್ಲೇ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ: ಮಹಿಳೆ ಸೇರಿ ನಾಲ್ವರು ಅರೆಸ್ಟ್
ಉತ್ತರಕಾಶಿಯಲ್ಲಿ ಆಳದ ಕಂದಕಕ್ಕೆ ಉರುಳಿದ ಕಾರು: ಸ್ಥಳದಲ್ಲೇ ಐವರ ದುರ್ಮರಣ
BREAKING NEWS : ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಪೋಟ ಪ್ರಕರಣ : ಆಟೋದಲ್ಲಿ ಅನುಮಾನಸ್ಪದ ವಸ್ತುಗಳು ಪತ್ತೆ!
SHOCKING NEWS: ಚಲಿಸುತ್ತಿದ್ದ ಕಾರಿನಲ್ಲೇ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ: ಮಹಿಳೆ ಸೇರಿ ನಾಲ್ವರು ಅರೆಸ್ಟ್