ಧಾರವಾಡ : ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಕಾರ್ಡ್ ಸೌಲಭ್ಯ ಪಡೆಯಲು ನಗರ ವ್ಯಾಪ್ತಿಯ ಕರ್ನಾಟಕ ಒನ್ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬರುವ ಸೋಮವಾರ ನ.21 ರಿಂದ ನೋಂದಣಿ ಆರಂಭವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
BREAKING NEWS: ಅಮೆರಿಕದ ಮಾಜಿ ಅಧ್ಯಕ್ಷ ʻಡೊನಾಲ್ಡ್ ಟ್ರಂಪ್ʼ ʻಟ್ವಿಟರ್ʼ ಖಾತೆ ಮರುಸ್ಥಾಪನೆ: ಎಲಾನ್ ಮಸ್ಕ್
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯು ಜಗತ್ತಿನಲ್ಲಿಯೇ ಅತಿ ದೊಡ್ಡ ಸರ್ಕಾರದ ಅನುದಾನಿತ ಎಲ್ಲರಿಗೂ ಆರೋಗ್ಯ ರಕ್ಷಣೆಯ ಭರವಸೆ ನೀಡುವ ಯೋಜನೆಯಾಗಿದೆ. ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ (AB-PMAY-Ark) ಅಡಿಯಲ್ಲಿ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ವಾರ್ಷಿಕ ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸೆಗೆ ಅರ್ಹತೆ ನೀಡುತ್ತದೆ. ಎ.ಪಿ.ಎಲ್, ಕಾರ್ಡ್ ಹೊಂದಿದ ಕುಟುಂಬಕ್ಕೆ ವಾರ್ಷಿಕ ರೂ.1.50 ಲಕ್ಷದವರೆಗೆ ಉಚಿತ ಚಿಕಿತ್ಸೆಗೆ ಅರ್ಹತೆ ನೀಡುತ್ತದೆ.
ಆಯುμÁ್ಮನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ (AB-PMAY-Ark) ನಗದು ರಹಿತ ಆರೋಗ್ಯ ಯೋಜನೆಯಾಗಿದೆ. ದೇಶದಾದ್ಯಂತ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕವನ್ನು ಅ.ಭಾ.ಪ್ರಜಯೋ.ಆ.ಕ ಅಡಿಯಲ್ಲಿ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಉಜ್ಜಯಿನಿ: ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿ 1,351 ಬಗೆಯ ಖಾದ್ಯ ಅರ್ಪಣೆ
ಈ ಗುರುತಿನ ಕಾರ್ಡ್ Co-Branded ಕಾರ್ಡ್ ಆಗಿದ್ದು, ಇದು ಭಾರತ ಆರೋಗ್ಯ ಖಾತೆ (ABHA) & ಆಯುμÁ್ಮನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ (AB-PMJAY) ಎರಡೂ ಗುರುತಿನ ಕಾರ್ಡ ಸಂಖ್ಯೆಗಳನ್ನು ಒಳಗೊಂಡಿರುತ್ತದೆ.
ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ (AB-PMJAY-Ark) ಗುರುತಿನ ಕಾರ್ಡ ವಿತರಣೆ 18 ನೇ ಆಗಸ್ಟ್ 2022 ರಿಂದ ರಾಜ್ಯಾದಂತ ಪ್ರಾರಂಭಿಸಲಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಫಲಾನುಭವಿಗಳಿಗೆ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ದೇಶಿಸಿದೆ.
ಈಗಾಗಲೇ ಆಯುμÁ್ಮನ್ ಭಾರತ-ಆರೋಗ್ಯ ಕರ್ನಾಟಕ (AB- Ark) ಗುರುತಿನ ಕಾರ್ಡ್ ಹೊಂದಿದವರು ಸಹ ಮತ್ತೊಮ್ಮೆ (AB-PMJAY-Ark) ನೋಂದಣಿ ಮಾಡಿಕೊಂಡು ಗುರುತಿನ ಕಾರ್ಡ್ ಪಡೆಯಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 15, 2022 ರೊಳಗಾಗಿ 16,07,020 ಎ.ಪಿ.ಎಲ್. ಮತ್ತು ಬಿ.ಪಿ.ಎಲ್. ಕುಟುಂಬದ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯವನ್ನು ಪೂರ್ಣವಾಗಿ ಪೂರೈಸಲು ಸಾರ್ವಜನಿಕ ದೃಷ್ಟಿಯಿಂದ ಅಗತ್ಯವಿದ್ದು, ಉಚಿತವಾಗಿ ಈಗಾಗಲೇ ಗ್ರಾಮೀಣ ಭಾಗದಲ್ಲಿ ಇರುವಂತಹ ಗ್ರಾಮ ಒನ್ ಕೇಂದ್ರಗಳಲ್ಲಿ ಈ ಕಾರ್ಡಗಳನ್ನು ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 177 ಗ್ರಾಮ ಓನ್ ಕೇಂದ್ರಗಳಿದ್ದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 21,2022 ಸೋಮವಾರದಿಂದ ಧಾರವಾಡ ನಗರದಲ್ಲಿ ಬರುವ 6 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ, ಹೆಚ್.ಡಿ.ಎಂ.ಸಿ, ಹರಿಗೆ ಆಸ್ಪತ್ರೆ ಧಾರವಾಡ, ಹಾಗೂ ಹುಬ್ಬಳ್ಳಿ ನಗರದಲ್ಲಿ ಬರುವ 13 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಚಿಟಗುಪ್ಪಿ ಆಸತ್ರೆ, ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ಬರುವ 2 ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರಗಳು ಹಾಗೂ ಹುಬ್ಬಳ್ಳಿ ನಗರದಲ್ಲಿ ಬರುವ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರಗಳಲ್ಲಿ ಗುರುತಿನ ಕಾರ್ಡಗಳನ್ನು ವಿತರಿಸಲಾಗುವದು.
ಧಾರವಾಡ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಯುಪಿಎಚ್ಸಿ ಮೊನೆಹರು ನಗರ, ಯುಪಿಎಚ್ಸಿ ಮಾದರಮಡ್ಡಿ, ಯುಪಿಎಚ್ಸಿ ಮೊಬರಕುತ್ರಿ, ಯುಪಿಎಚ್ಸಿ ಎಚ್ಡಿಎಂಸಿ ಧಾರವಾಡ, ಯುಪಿಎಚ್ಸಿ ಪಿಹೆಚ್ ಕ್ಯೂ, ಯುಪಿಎಚ್ಸಿ ಪುರೋಹಿತನಗರ.
ಹುಬ್ಬಳ್ಳಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಯುಪಿಎಚ್ಸಿ ಗಾಂಧಿವಾಡ ಪಿಎಚ್ಸಿ, ಯುಪಿಎಚ್ಸಿ ದೊಡ್ಡಕೇರಿ, ಯುಪಿಎಚ್ಸಿ ರಾಮಲಿಂಗೇಶ್ವರನಗರ, ಯುಪಿಎಚ್ಸಿ ಆನಂದನಗರ, ಯುಪಿಎಚ್ಸಿ ಹೆಗ್ಗೆರೆ, ಯುಪಿಎಚ್ಸಿ ಅಯೋಧ್ಯನಗರ, ಯುಪಿಎಚ್ಸಿ ಬಾಣತಿಕಟ್ಟ, ಯುಪಿಎಚ್ಸಿ ನವನಗರ, ಯುಪಿಎಚ್ಸಿ ಮ್ಯಾದಾರ ಓಣಿ, ಯುಪಿಎಚ್ಸಿ ಹಳೇಹುಬ್ಬಳ್ಳಿ, ಯುಪಿಎಚ್ಸಿ ತೊರವಿಗಲ್ಲಿ, ಯುಪಿಎಚ್ಸಿ ಗಣೇಶಪೇಠ, ಯುಪಿಎಚ್ಸಿ ಚಿಟಗುಪ್ಪಿ.
ಕರ್ನಾಟಕ ಒನ್ ಕೇಂದ್ರಗಳು ವಿಳಾಸ ಮತ್ತು ಸಂಪರ್ಕ ವಿವರಗಳು: ಹುಬ್ಬಳ್ಳಿ-ಧಾರವಾಡ ಗಾಜಿನ ಮನೆ, ಕರ್ನಾಟಕ ಒನ್ ಕೇಂದ್ರ, ಇಂದಿರಾ ಗ್ಲಾಸ್ ಕಾಂಪೌಂಡ್, ಹೆಚ್ಡಿಎಂಸಿ, ಝೋನಲ್ ಆಫೀಸ್ ನಂ.9 ಬಿಲ್ಡಿಂಗ್, ಹುಬ್ಬಳ್ಳಿ-580030, ದೂರವಾಣಿ 0836-2362880., ಕಲಾಭವನ ಕರ್ನಾಟಕ ಒನ್ ಕೇಂದ್ರ, 1 ನೇ ಮಹಡಿ, ಹೆಚ್ಡಿಎಂಸಿ ಝೋನಲ್ ಆಫೀಸ್ ಹತ್ತಿರ, ನಂ.12. ಹುಬ್ಬಳ್ಳಿ-ಧಾರವಾಡ ರಸ್ತೆ, ಧಾರವಾಡ-580001, ದೂರವಾಣಿ 0836-2444098., ನವನಗರ ಕರ್ನಾಟಕ ಒನ್ ಕೇಂದ್ರ ಹೆಚ್ ಡಿಎಂಸಿ, ಝೋನಲ್ ಆಫೀಸ್ ಹತ್ತಿರ, ನಂ.4 ಅಂಬೇಡ್ಕರ್ ಭವನ, ನವನಗರ, ಹುಬ್ಬಳ್ಳಿ-580025. ದೂರವಾಣಿ 0836-2224333, ಕೇಶ್ವಾಪುರ ಕರ್ನಾಟಕ ಒನ್ಕೇಂದ್ರ, ಹೆಚ್ಡಿಎಂಸಿ, ಝೋನಲ್ ಆಫೀಸ್ ಹತ್ತಿರ, ನಂ.6 ಹಳೆ ಬಾದಾಮಿ ನಗರ, ಕೇಶ್ವಾಪುರ, ಹುಬ್ಬಳ್ಳಿ-580023 ದೂರವಾಣಿ 0836-2280905., ಅಕ್ಷಯ ಪಾರ್ಕ್ ಕರ್ನಾಟಕ ಒನ್ ಕೇಂದ್ರ ಅಕ್ಷಯ್ ಪಾರ್ಕ್ ಅಪಾರ್ಟ್ಮೆಂಟ್, ವಿಜಯಾ ಬ್ಯಾಂಕ್ ಪಕ್ಕದಲ್ಲಿ, ಗೋಕುಲ್ ರಸ್ತೆ, ಹುಬ್ಬಳ್ಳಿ-580030 ದೂರವಾಣಿ 0836-2335001, ವಿಜಯನಗರ ಕರ್ನಾಟಕ ಒನ್ ಕೇಂದ್ರ, ಲಯನ್ ಆಂಗ್ಲ ಮಾಧ್ಯಮ ಶಾಲೆಯ ಹಿಂದೆ, ವಿಜಯನಗರ, ಹುಬ್ಬಳ್ಳಿ- 580032, ದೂರವಾಣಿ 0836-2253332., ಸಿದ್ದೇಶ್ವರನಾಗ್ ಕರ್ನಾಟಕ ಒನ್ ಕೇಂದ್ರ, ಸರ್ಕಾರಿ ಮೆಟ್ರಿಕ್ ವಿದ್ಯಾರ್ಥಿಗಳ ಹಾಸ್ಟೆಲ್ ಪಕ್ಕ, ಸಿದ್ದೇಶ್ವರ ನಗರ, ಹುಬ್ಬಳ್ಳಿ 580021 ದೂರವಾಣಿ 0836-2371080., ಬಾರಾಕೊಟ್ರಿ, ಕರ್ನಾಟಕ ಒನ್ ಕೇಂದ್ರ, ಕಲ್ಯಾಣ್ ನಗರ ರಸ್ತೆ, ಧಾರವಾಡ 580001, ದೂರವಾಣಿ 0836-2444099., ಆನಂದ್ ನಗರ ಕರ್ನಾಟಕ ಒನ್ ಕೇಂದ್ರ, ಕುಷ್ಠರೋಗ ಆಸ್ಪತ್ರೆ ಹತ್ತಿರ, ಆನಂದನಗರ, ಹುಬ್ಬಳ್ಳಿ-580024 ದೂರವಾಣಿ 0836-2207934, ಐಟಿ ಪಾರ್ಕ್ ಕರ್ನಾಟಕ ಒನ್ ಕೇಂದ್ರ, ವಾಗ್ವಿಲ್ಲಸ್ ಹತ್ತಿರ, ಆರ್.ಟಿ. ಕಂಪ್ಯೂಟರ್ಸ್ ಹಿಂದೆ, ಐಟಿ ಪಾರ್ಕ್ ಕಟ್ಟಡ ಹುಬ್ಬಳ್ಳಿ-580030 ದೂರವಾಣಿ 0836-2970197, ಕೋಟಗಿರಿ ಓಣಿ, ಕರ್ನಾಟಕ ಒನ್ ಕೇಂದ್ರ ಕೋಟಗಿರಿ ಓಣಿ, ಮೀನು ಮಾರುಕಟ್ಟೆ ಹಿಂದೆ, ಹಳೇ ಹುಬ್ಬಳ್ಳಿ, ಹುಬ್ಬಳ್ಳಿ-580024, ದೂರವಾಣಿ 0836-2202788, ಶ್ರೀರಾಮ್ ನಗರ, ಕರ್ನಾಟಕ ಒನ್ ಕೇಂದ್ರ, ಶ್ರೀರಾಮನಗರ, ವಾರ್ಡ್ ನಂ.63, ಸರ್ಕಾರಿ ಆಸ್ಪತ್ರೆ ಹಿಂಭಾಗ, ಹುಬ್ಬಳ್ಳಿ -580024 ದೂರವಾಣಿ 0836-2204949, ವೀರಾಪುರ ಕರ್ನಾಟಕ ಒನ್ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿ ಕಚೇರಿ ಚಾವಣಿ, ವೀರಾಪುರ ಓಣಿ, ಹುಬ್ಬಳ್ಳಿ-580020, ದೂರವಾಣಿ 0836-2955959.
ಫಲಾನುಭವಿಗಳು ತಮ್ಮ ಕುಟುಂಬ ಎಲ್ಲ ಸದಸ್ಯರೊಂದಿಗೆ ರೇಷನ್ ಕಾರ್ಡ್, ಆಧಾರ ಕಾರ್ಡ್ ಹಾಗೂ ಆಧಾರ ಕಾರ್ಡ್ನಲ್ಲಿ ನಮೂದಿಸಿದ ಮೊಬೈಲ್ ತೆಗೆದುಕೊಂಡು ಹೋಗಬೇಕು. ತಪ್ಪಿದ್ದಲ್ಲಿ ತಮ್ಮ ಬೆರಳಚ್ಚು ನೀಡಿ ನೋಂದಣಿ ಮಾಡಿಕೊಂಡು ಗುರುತಿನ ಕಾರ್ಡ್ ಪಡೆಯಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.