ನವದೆಹಲಿ: ತಿಹಾರ್ ಜೈಲಿನಿಂದ ಕೇಂದ್ರ ಸಚಿವ ಸತ್ಯೇಂದರ್ ಜೈನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ದೆಹಲಿ ನ್ಯಾಯಾಲಯವು ಸೋಮವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ವೀಡಿಯೊ ಸೋರಿಕೆಯ ಬಗ್ಗೆ ಉತ್ತರವನ್ನು ಕೋರಲಾಗಿದೆ.
ವೀಡಿಯೊ ಸೋರಿಕೆಯಾದ ನಂತರ, ಸತ್ಯೇಂದರ್ ಜೈನ್ ಅವರ ಕಾನೂನು ತಂಡವು ಜಾರಿ ನಿರ್ದೇಶನಾಲಯದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕಾಗಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಅಫಿಡವಿಟ್ ನೀಡಿದ ಹೊರತಾಗಿಯೂ ಇಡಿ ಸಿಸಿಟಿವಿ ವೀಡಿಯೊವನ್ನು ಸೋರಿಕೆ ಮಾಡಿದೆ ಎಂದು ಜೈನ್ ಅವರ ಕಾನೂನು ತಂಡ ಆರೋಪಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್ ಧುಲ್ ಅವರು ಇ.ಡಿ.ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ನವೆಂಬರ್ 21 ಕ್ಕೆ ಮುಂದೂಡಿದ್ದಾರೆ.
ತಿಹಾರ್ ಜೈಲಿನ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅದರಲ್ಲಿ ಸತ್ಯೇಂದ್ರ ಜೈನ್ ಹಾಸಿಗೆಯ ಮೇಲೆ ಮಲಗಿ ಕೆಲವು ದಾಖಲೆಗಳನ್ನು ನೋಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ಒಬ್ಬ ವ್ಯಕ್ತಿಯು ತನ್ನ ಕಾಲಿಗೆ ಮಸಾಜ್ ಮಾಡುತ್ತಾನೆ. ಸತ್ಯೇಂದ್ರ ಜೈನ್ ತನ್ನ ಪಾದಗಳನ್ನು ಅ ವ್ಯಕ್ತಿ ಮೇಲೆ ಇರಿಸಿ ಮಸಾಜ್ ಮಾಡಿಸಿಕೊಳ್ಳವುದನ್ನು ಕಾಣಬಹುದಾಗಿದೆ.