ಚಿಕ್ಕಮಗಳೂರು : ಬಾಬಾಬುಡನ್ ಗಿರಿ ದತ್ತಪೀಠದಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಎಂಟು ಸದಸ್ಯರ ಆಡಳಿತ ಮಂಡಳಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಓರ್ವ ಮುಸ್ಲಿಂ ಸದಸ್ಯ ಸೇರಿ 8 ಮಂದಿ ಸದಸ್ಯರು ಈ ಆಡಳಿತ ಮಂಡಳಿಯಲ್ಲಿರಲಿದ್ದು, ಇವರು ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ.
BIGG NEWS : 1 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ : ಆರೋಪಿಗೆ ಗಲ್ಲು ಶಿಕ್ಷೆ
ವ್ಯವಸ್ಮಾಪನಾ ಸಮಿತಿಗೆ ಆಯ್ಕೆ ಮಾಡಲಾದ ಸದಸ್ಯರ ಹೆಸರು ಮತ್ತು ವಿಳಾಸ
1) ಸತೀಶ್ ಕ ತಂದೆ ಕೃಷ್ಣ ಐ.ಡಿ ವೀರ, ಅತಿಗುಂಡಿ, ಚಿಕ್ಕಮಗಳೂರು ತಾಲ್ಲೂಕು-577131
2) ಲೀಲಾ ಸಿ.ಜಿ. ಕೋಂ ವರಮೇಶ್ ಬಾಗಡೇಹಳ್ಳಿ, ಕ್ರಮರ, ಚಿಕ್ಕಮಗಳೂರು-577131
3) ಶ್ರೀಲಾ ಕೋಲ: ವೆಂಕಟೇಶ್, ಆರೇಹಳ್ಳಿ, ಯರೇಹಳ್ಳಿ, ಚಿಕ್ಕಮಗಳೂರು-577101
4) ಸುಮಂತ್ ಎನ್.ಎಸ್. ತಂದೆ ಎನ್.ಜಿ, ಶ್ರೀಕೃಷ್ಣಭಟ್, ‘ತುಂಗೋತ್ರಿ’ ನಂ. 471/1, ವಾರ್ಡ್ ನಂ: 25, ಲಕ್ಪಾರ್ಕ್ ರಸ್ತೆ, ವಿಜಯಪುರ, ಚಿಕ್ಕಮಗಳೂರು -577101
5) . ಕೆ.ಎಸ್, ಗುರುವೇಶ್ ತಂದೆ: ಕ.ಎಂ. ಸಿದ್ದೇಗೌಡ, 3ನೇ ಅಡ್ಡರಸ್ತೆ, ಹನುಮಂತನಗರ, ರಾಮನಹಳ್ಳಿ, ಚಿಕ್ಕಮಗಳೂರು -577101,
6) ಜಿ.ಹಚ್ ಹೇಮಂತ್ ಕುಮಾರ್ ತಂದೆ: ಗಂಗಣ, ಮಾರುತಿ ನಿಲಯ, ರತ್ನಗಿರಿ ಬಡಾವಣೆ, 23-577101.
7) ಎಸ್.ಎಂ. ಬಾಷಾ ತಂದೆ: ಹಸನ್ ಅಲಿ ಶಾ, ಮದೀನ ಮಸೀದಿ ರಸ್ತೆ, 2ನೇ ಅಡ್ಕ ರಸ್ತೆ, ಎಂ.ಪಿ.ಸಿ.ಸಿ.ಡಬ್ಲ್ಯೂ… ಕೂ.ರಿಂಗ್ ಮಾರ್ಕೆಟ್ ರಸ್ತೆ, ಚಿಕ್ಕಮಗಳೂರು-577101
8.) ಸಿ.ಎಸ್. ಚೇತನ ತಂದೆ: ಶಂಕರ, ನರಿಗುಡೇನಹಳ್ಳಿ, ಜೋತಿನಗರ, ಅಂಚೆ,
ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕು, ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಯಲಿದೆ ಎಂದು ಶ್ರೀರಾಮಸೇನೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ‘ದತ್ತಪೀಠವನ್ನು ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಬೇಕು ಎಂದು ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಪ್ರತಿವರ್ಷ ದತ್ತಪೀಠಕ್ಕೆ ಬಂದು ಅಲ್ಲಿ ಹೆಣ ಇಲ್ಲದ ಗೋರಿಗಳನ್ನು ನೋಡಿಕೊಂಡು ಹೋಗುವುದು ಮಾಡುತ್ತಿರುವುದನ್ನು ನೋಡಿ ನಮಗೆ ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬಂದಿದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಆಕ್ರೋಶ ಹೊರಹಾಕಿದರು.
ಬಾಬಾ ಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಇತ್ತೀಚೆಗೆ ಆದೇಶ ಹೊರಡಿಸಿತ್ತು. ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ’ ಎಂದು ಸಂಪುಟದಲ್ಲಿ ನಿರ್ಧರಿಸಲಾಗಿತ್ತು.ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ಆದೇಶ ಹೊರಡಿಸಿತ್ತು,
ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಮುಜಾವರ್ ಜೊತೆ ಆಗಮಶಾಸ್ತ್ರ ಗೊತ್ತಿರುವ ಹಿಂದೂ ಅರ್ಚಕರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿತ್ತು. ಈ ಸಂಬಂಧ ಕಳೆದ ಆಗಸ್ಟ್ 19 ರಂದು ಸುತ್ತೋಲೆ ಹೊರಡಿಸಿದ್ದು, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರತಿನಿಧಿಗಳು ಇರುವ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಅರ್ಚಕ ಮತ್ತು ಮುಜಾವರ್ ಅವರನ್ನು ಈ ವ್ಯವಸ್ಥಾಪನಾ ಸಮಿತಿಯಿಂದಲೇ ನೇಮಿಸಬೇಕು ಎಂದು ಸೂಚನೆ ನೀಡಿತ್ತು.