ಬೆಂಗಳೂರು ; ತೀವ್ರ ವಿರೋಧದ ನಡುವೆಯೂ ಶಾಲೆಗಳಲ್ಲಿ ಧ್ಯಾನ ಕ್ಲಾಸ್ ಜಾರಿಗೊಳಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಮುಂದಿನ ತಿಂಗಳಿನಿಂದ ಶಾಲೆಗಳಲ್ಲಿ ಧ್ಯಾನ ಕಲಿಸುವ ಯೋಜನೆ ಜಾರಿಯಾಗಲಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷೆ ನೋಂದಣಿಗೆ ನ.28 ಕೊನೇ ದಿನ
ಶಾಲೆಗಳಲ್ಲಿ ಧ್ಯಾನ ಕಲಿಸಲು ಪತಂಜಲಿ ಯೋಗ ಎಕ್ಸ್ ಪರ್ಟ್ ಗಳ ಸಲಹೆ ಪಡೆಯಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಅಲ್ಲದೇ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರ ಸಲಹೆ ಪಡೆಯಲು ಚಿಂತನೆ ನಡೆಸಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಯಾವ ರೀತಿ ಧ್ಯಾನ ಹೇಳಿಕೊಡಬೇಕು? ಎಷ್ಟು ಹೊತ್ತು ಧ್ಯಾನ ಮಾಡಬೇಕು ಎಂಬುದ ರಬಗ್ಗೆ ಸಲಹೆ ಪಡೆಯಲು ನಿರ್ಧರಿಸಲಾಗಿದೆ.
ಜಾಗತೀಕರಣ ಫಲವಾಗಿ ವಿದೇಶದ ಮಕ್ಕಳೊಂದಿಗೆ ನಮ್ಮ ಮಕ್ಕಳು ಪೈಪೋಟಿ ನಡೆಸಬೇಕು. ಆ ನಿಟ್ಟಿನಲ್ಲಿ ಅವರ ಬುದ್ಧಿಶಕ್ತಿ ಹೆಚ್ಚಿಸಬೇಕಾಗಿದೆ. ಉತ್ತಮ ದೇಹ, ಮನಸ್ಥಿತಿ ಇದ್ದರೆ ಶಿಕ್ಷಣ ಪಡೆಯಲು ಸಾಧ್ಯ. ಇದಕ್ಕಾಗಿ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ಸಿ.ಎಂ. ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
BIGG NEWS : `SC-ST’ ಮೀಸಲಾತಿ ಹೆಚ್ಚಳ : ಸರ್ಕಾರಿ ನೌಕರರ ನೇಮಕಾತಿಗೆ ತಡೆ