ನವದೆಹಲಿ : ಸರ್ಕಾರಿ ವಾಹನದ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಐಎಎಸ್ ಅಧಿಕಾರಿಯನ್ನು ಗುಜರಾತ್ ಚುನಾವಣಾ ವೀಕ್ಷಕ ಸ್ಥಾನದಿಂದ ತೆಗೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಪೇಕ್ ಸಿಂಗ್ ಅವರು ಪ್ರಚಾರಕ್ಕಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಆರೋಪಿಸಿದೆ.
ಅಭಿಷೇಕ್ ಸಿಂಗ್ ಉತ್ತರಪ್ರದೇಶದ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರನ್ನು ಅಹಮದಬಾದ್ ನ ಎರಡು ಕ್ಷೇತ್ರಗಳಾದ ಬಾಪುನಗರ ಮತ್ತು ಅಸರ್ವಾದ ಸಾಮಾನ್ಯ ವೀಕ್ಷಕರಾಗಿ ನೇಮಿಸಲಾಗಿತ್ತು.
ಫೋಟೋವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ತಕ್ಷಣವೇ ಅಭಿಷೇಕ್ ಅವರನ್ನು ಸಾಮಾನ್ಯ ವೀಕ್ಷಕ ಸ್ಥಾನದಿಂದ ತೆಗೆದು ಹಾಕಿದೆ. ಮುಂದಿನ ಆದೇಶದವರೆಗೆ ಯಾವುದೇ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುವಂತಿಲ್ಲ. ಇದರ ಜೊತೆಗೆ ನೇಮಿಸಿದ ಕ್ಷೇತ್ರದಿಂದ ತೊರೆಯುವಂತೆ ಆದೇಶಿಸಲಾಗಿದೆ.
ಸುಮಾರು 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.
‘ಬಣ್ಣದ ಲೋಕದಲ್ಲಿ ಮೋಸ’ : ನಿರ್ಮಾಪಕನ ವಿರುದ್ಧ ನಟಿಯಿಂದ ‘ಅರೆಬೆತ್ತಲೆ’ ಪ್ರೊಟೆಸ್ಟ್ |Actress Sunita Boya