ಚಿಕ್ಕಮಗಳೂರು : ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆ ಕಡೂರು ಇಒ ದೇವರಾಜ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಹುಬ್ಬಳ್ಳಿ ಮೂಲದ ಬಸವರಾಜ್ ಗೆ ದೇವರಾಜ್ ಪರ್ಸಂಟೇಜ್ ಡಿಮ್ಯಾಂಡ್ ಮಾಡಿದ್ದರು. ಕೋವಿಡ್ ನಂತಹ ತುರ್ತು ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳಿಗೆ ಕೋವಿಡ್ ಪರಿಕರಗಳನ್ನು ಪೂರೈಸುವ ಕೆಲಸ ಮಾಡಿದ್ದನು , ಸಾಮಗ್ರಿಗಳನ್ನು ಪೂರೈಸಿ ಎರಡು ವರ್ಷ ಆದರೂ ಮಾತ್ರ ಪಾವತಿಯಾಗಿರಲಿಲ್ಲ,ಈ ಬಿಲ್ ಮಂಜೂರು ಮಾಡಲು ದೇವರಾಜ್ ಹಣಕ್ಕೆ ಬೇಡಿಕೆಯಿಟ್ಟಿದ್ದನು ಎನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಇಒ ದೇವರಾಜ್ ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ಎಂಬುವವರ ಬಳಿ ಹಣಕ್ಕೆ ಬೇಡಿಕೆಯಿಟ್ಟ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಡಿಯೋ ವೈರಲ್ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ದೇವರಾಜ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
BREAKING NEWS : ಬೇಹುಗಾರಿಕೆ ಆರೋಪ ; ವಿದೇಶಾಂಗ ಸಚಿವಾಲಯ ‘ಚಾಲಕ’ ಅರೆಸ್ಟ್ |Foreign Ministry Driver Arrested