ಕೆಎನ್ಎನ್ಡಿಜಿಟಲ್ ಡೆಸ್ಕ್ : ಆಚಾರ್ಯ ಚಾಣಕ್ಯರು ಅವರ ನೀತಿಶಾಸ್ತ್ರದಲ್ಲಿ ಬಹುತೇಕ ಎಲ್ಲಾ ವಿಷಯಗಳ ಬಗ್ಗೆಯೂ ವಿವರಿಸಿದ್ದಾರೆ. ಚಾಣುಕ್ಯ ಬೋಧನೆಗಳು ಜೀವನದಲ್ಲಿ ತಪ್ಪುಗಳನ್ನ ತಪ್ಪಿಸಲು, ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡುತ್ವೆ. ಇಂದಿಗೂ ಅನೇಕ ಜನರು ಚಾಣುಕ್ಯನ ನೀತಿಶಾಸ್ತ್ರವನ್ನ ಅನುಸರಿಸುತ್ತಾರೆ. ಅದ್ರಂತೆ, ಚಾಣುಕ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನ ಹಂಚಿಕೊಂಡಿದ್ದಾರೆ. ನೀತಿಶಾಸ್ತ್ರದಲ್ಲಿ ಕೋಪದ ಬಗ್ಗೆಯೂ ವಿವರಿಸಿದ್ದಾರೆ.
ಕೋಪವು ಸಹಜ ಕ್ರಿಯೆ.. ಆದ್ರೆ, ಅನೇಕ ಬಾರಿ ಕೆಲವರು ಅನಗತ್ಯವಾಗಿ ಕೋಪಗೊಳ್ಳುತ್ತಾರೆ. ಇದರಿಂದ ನಮ್ಮ ಕೆಲಸ ಕೆಡುವುದಲ್ಲದೇ ಮನುಷ್ಯ ಸಂಬಂಧಗಳೂ ಹಾಳಾಗುತ್ತವೆ. ಅದಕ್ಕೇ ಯೋಚಿಸಿ ಮಾತನಾಡಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಸಂದರ್ಭಗಳಿಗೆ ತನ್ನನ್ನು ತಾನು ಹೊಂದಿಸಿಕೊಳ್ಳಬೇಕು. ಅನೇಕ ಬಾರಿ ನಾವು ಕೋಪಗೊಂಡಾಗ ಮತ್ತು ಇತರರ ಭಾವನೆಗಳನ್ನ ನೋಯಿಸಿದಾಗ ಏನು ಮಾಡಬೇಕೆಂದು ನಮಗೆ ತಿಳಿಯೋದಿಲ್ಲ. ಅದ್ರಂತೆ, ಅತಿಯಾದ ಕೋಪದ ಮೇಲೆ ಚಾಣಕ್ಯ ನೀತಿಯು ಅತ್ಯುತ್ತಮ ಮಾರ್ಗದರ್ಶಕ ಎಂದು ಸಾಬೀತುಪಡಿಸುತ್ತದೆ.
ವಿಚಾರ ಪೂರ್ವಕವಾಗಿ ಮಾತನಾಡಿ.!
ಯಾವುದೇ ವ್ಯಕ್ತಿ ಯೋಚಿಸಿದ ನಂತ್ರವೇ ಮಾತನಾಡಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದರು. ಯಾವಾಗ, ಏನು ಮತ್ತು ಹೇಗೆ ಮಾತನಾಡಬೇಕು ಎಂಬುದನ್ನ ಅರಿತುಕೊಳ್ಳುವುದು ಮುಖ್ಯ.. ಯಾಕಂದ್ರೆ, ಒಮ್ಮ ಆಡಿದ ಹೇಳಿದ ಮಾತನ್ನ ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಮಾತಿನಿಂದಲೇ ಇತರರ ಮನಸ್ಸಿನಲ್ಲಿ ಗೌರವ ಮೂಡುತ್ತದೆ ಎಂದು ಚಾಣಕ್ಯ ಬಹಿರಂಗಪಡಿಸಿದರು. ಒಬ್ಬ ವ್ಯಕ್ತಿಯು ಕೋಪಗೊಂಡಾಗ ಇಂತಹ ಕೆಲವು ಸನ್ನಿವೇಶಗಳು ಜೀವನದಲ್ಲಿ ಅನೇಕ ಬಾರಿ ಸಂಭವಿಸುತ್ತವೆ. ಅದಕ್ಕಾಗಿಯೇ ಆಲೋಚನೆಯು ಮುಖ್ಯವಾಗಿದೆ.
ನಿಮ್ಮ ಧ್ವನಿ ನಿಯಂತ್ರಿಸಿ.!
ಒಬ್ಬ ವ್ಯಕ್ತಿಯು ಕೋಪಗೊಂಡಾಗ, ಆತ ಮಾತನಾಡುವ ಮಾತು ವಿಷಪೂರಿತ. ಕೋಪ ಕಡಿಮೆಯಾದ ನಂತರ ಅದೇ ವ್ಯಕ್ತಿಯ ಮಾತುಗಳನ್ನ ನೆನಪಿಸಿಕೊಂಡಾಗ, ಅದು ಆತನಿಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ನಂತರ ಅವನು ಪಶ್ಚಾತ್ತಾಪ ಪಡಲು ಪ್ರಾರಂಭಿಸುತ್ತಾನೆ. ಆದ್ದರಿಂದಲೇ ಮಾತನಾಡುವಾಗ ಮಾತಿನ ಮೇಲೆ ಹಿಡಿತ ಸಾಧಿಸಬೇಕು ಎಂದು ಚಾಣುಕ್ಯ ಹೇಳುತ್ತಾರೆ. ಇನ್ನು ಮಾತನಾಡುವಾಗ, ಇತರರು ಏನು ಹೇಳುತ್ತಾರೆಂದು ಆಲಿಸಿ.
ತಕ್ಷಣ ಪ್ರತಿಕ್ರಿಯಿಸಬೇಡಿ.!
ಆಚಾರ್ಯ ಚಾಣಕ್ಯ ಕೂಡ ಯಾವುದೇ ವಿಷಯದ ಬಗ್ಗೆ ತಕ್ಷಣ ಪ್ರತಿಕ್ರಿಯಿಸಬೇಡಿ ಎಂದು ಹೇಳುತ್ತಾರೆ. ಯಾರಾದರೂ ಏನಾದರೂ ಹೇಳಿದ್ರೆ, ನಾವು ಮೊದಲು ಅದರ ಬಗ್ಗೆ ಯೋಚಿಸಬೇಕು. ತಕ್ಷಣದ ಪ್ರತಿಕ್ರಿಯೆಯಿಂದಾಗಿ, ಅನೇಕ ಬಾರಿ ಸರಿಯಾದ ಪದಗಳನ್ನ ಬಳಸಲು ಸಾದ್ಯವಾಗೋಲ್ಲ. ಇದು ಇತರ ವ್ಯಕ್ತಿಗೆ ನಿಮ್ಮ ಮೇಲೆ ತಪ್ಪು ಅಭಿಪ್ರಾಯವನ್ನ ನೀಡಬಹುದು. ಆದ್ದರಿಂದಲೇ ಕೋಪದ ಸಮಯದಲ್ಲಿ ಶಾಂತವಾಗಿ ವರ್ತಿಸಬೇಕು. ಸದಾ ಚಿಂತನಶೀಲವಾಗಿ ಮಾತನಾಡಬೇಕು ಎಂದು ತಿಳಿಸಿದ್ದಾರೆ.
ಶಿವಮೊಗ್ಗ: ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ, 30 ಹಾಸಿಗೆ ಮಾದರಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತಿ
HEALTH TIPS: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪರಿಣಾಮಕಾರಿ ಮಧುಮೇಹ ಸ್ನೇಹಿ ಪಾನೀಯಗಳು..!