ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಳಿಗಾಗಿ ಜನರು ಮುಂದೆ ಹೋಗಿ ಏಕೆ ರಾಜಕೀಯವಾಗಿ ಬೆತ್ತಲಾಗುತ್ತೀರಿ? ಸರ್ಕಾರ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಇತಿಹಾಸದಲ್ಲೇ ರಾಜಕೀಯ ಹುನ್ನಾರ ಮಾಡಿಲ್ಲ ಎಂದು ಸಚಿವ ಸುಧಾಕರ್ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
BIGG NEWS: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?; ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ
ನಗರದಲ್ಲಿ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿಯಲ್ಲಿ ಬಿಜೆಪಿ ಅವ್ಯವಹಾರ ನಡೆಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಸರ್ಕಾರದ ಖಜಾನೆಯಿಂದ 130 ಕೋಟಿ ಖರ್ಚು ಮಾಡಿ ಕಾಂತರಾಜು ಅಧ್ಯಕ್ಷತೆಯಲ್ಲಿ ಜಾತಿ ಸಮೀಕ್ಷೆ ಮಾಡಿಸಿದ್ರು. ಅದನ್ನ ಅಧಿಕೃತವಾಗಿ ಸ್ವೀಕಾರ ಮಾಡಲಿಲ್ಲ. ಬೇಕಾದ ಕಾಂಗ್ರೆಸ್ ಕ್ಯಾಂಡಿಡೇಟ್ ಗಳಿಗೆ ಮಾಹಿತಿ ಸೋರಿಕೆ ಮಾಡಿದ್ರು.
BIGG NEWS: ಸಿಎಂ, ಕಮಿಷನರ್ ಅನುಮತಿ ಇಲ್ಲದೆ ಮಾಡಲು ಆಗುತ್ತಾ?; ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ
ಇನ್ನೂ ಚುನಾವಣಾ ಆಯೋಗ ಮತದಾರರ ಸಮೀಕ್ಷಗೆ ಕೊಡೋದು ಸ್ಥಳೀಯವಾಗಿ ನಡೆದುಕೊಂಡು ಬಂದಿದೆ. ಒಂದು ವೇಳೆ ಎನ್ಜಿಒಗಳು ಕಾನೂನು ಮೀರಿ ನಡೆದುಕೊಂಡ್ರೆ ಆ ಸಂಸ್ಥೆ ಮೇಲೆ ಕಾನೂನು ಕ್ರಮ ಆಗುತ್ತದೆ. ಇದನ್ನ ಸರಳವಾಗಿ ಸ್ಪಷ್ಟವಾಗಿ ಸಿಎಂ ಹೇಳಿದ್ದಾರೆ. ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ಸಿಎಂ ಹೇಳಿದ್ರಾ ಎನ್ಜಿಒಗೆ ಕೊಡೋಕೆ? ಹಾಗಿದ್ರೆ ವಿರೋಧ ಪಕ್ಷದವರು ಎಷ್ಟು ಸಲ ರಾಜೀನಾಮೆ ಕೊಡಬೇಕಿತ್ತು. ಜಾತಿ ಸಮೀಕ್ಷೆ ಸೋರಿಕೆ ಮಾಡಿರೋದು ಬಹುದೊಡ್ಡ ಅಪರಾಧ. ಯಾವುದಾದರೂ ತಾರ್ಕಿಕ ವಿಷಯದ ಮೂಲಕ ಚರ್ಚೆಗೆ ಬನ್ನಿ ಸವಾಲ್ ಹಾಕಿದ್ದಾರೆ.