ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಮನೆ ಮಂದಿ ಎಲ್ಲ ಕೆಲಸ ಮಾಡುವುದರಿಂದ ಆಹಾರಗಳೆಲ್ಲ ಫ್ರಿಡ್ಜ್ನಲ್ಲಿಡುವುದು ಹವ್ಯಾಸವಾಗಿದೆ.
ಆದರೂ, ಕೆಲವು ಆಹಾರಗಳು ನಾವು ತಿನ್ನಬೇಕೆಂದು ತೆಗೆದ ಸಂದರ್ಭದಲ್ಲಿ ಹಾಳಾಗಿರುತ್ತವೆ. ಕೆಲ ಆಹಾರಗಳು ಒಂದು ಅಥವಾ ಎರಡು ದಿನಗಳ ಬಳಿಕ ಕೆಟ್ಟುಹೋಗಿರುತ್ತದೆ. ಇದು ಎಲ್ಲಾ ಮನೆಗಳಲ್ಲಿ ನಡೆಯುತ್ತವೆ. ಅದಕ್ಕೆ ಕಾರಣ ಫ್ರಿಡ್ಜ್ನಲ್ಲಿನ ತಾಪಮಾನ. ಫ್ರಿಡ್ಜ್ನಲ್ಲಿ ತಾಪಮಾನವು ತುಂಬಾ ಹೆಚ್ಚಿದ್ದರೆ, ಅಥವಾ ತುಂಬಾ ಕಡಿಮೆಯಿದ್ದರೆ, ಆಹಾರವು ಬೇಗನೆ ಕೆಡುವ ಸಾಧ್ಯತೆಗಳಿವೆ. ಹೀಗಾಗಿ ಅದನ್ನು ಸರಿಯಾಗಿ ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕು.
ರೆಫ್ರಿಜರೇಟರ್ ತಾಪಮಾನ ಹೇಗಿರಬೇಕು?
ವೇಸ್ಟ್ ಅಂಡ್ ರಿಸೋರ್ಸಸ್ ಆಕ್ಷನ್ ಪ್ರೋಗ್ರಾಂ (WRAP) ಪ್ರಕಾರ ಯುನೈಟೆಡ್ ಕಿಂಗ್ಡಮ್ನಲ್ಲಿ ಅರ್ಧದಷ್ಟು ಮನೆಗಳು ತಮ್ಮ ರೆಫ್ರಿಜರೇಟರ್ಗಳನ್ನು ಅಗತ್ಯವಿರುವ ತಾಪಮಾನಕ್ಕಿಂತ ಹೆಚ್ಚು, ಅಂದರೆ 7 ಡಿಗ್ರಿ ಸೆಲ್ಸಿಯಸ್ನಲ್ಲಿ ಇರಿಸುತ್ತಾರೆ. ಹೀಗೆ ಮಾಡುವುದರಿಂದ ಆಹಾರ ಪದಾರ್ಥಗಳು ಬೇಗನೆ ಕೆಡುತ್ತವೆ ಅಥವಾ ಕೊಳೆಯುತ್ತವೆ. WRAP ಪ್ರಕಾರ, ರೆಫ್ರಿಜರೇಟರ್ ತಾಪಮಾನವು 0 ರಿಂದ 5 ಡಿಗ್ರಿ ಸೆಲ್ಸಿಯಸ್ ನಡುವೆ ಇರಬೇಕಂತೆ. ಹೀಗಾಗಿ ಇದೇ ಕ್ರಮವನ್ನು ನೀವು ಕೂಡಾ ಪಾಲಿಸಬಹುದು.ವಿವಿಧ ಸಂಶೋಧನೆಗಳ ಪ್ರಕಾರ, ಫ್ರಿಡ್ಜ್ನಲ್ಲಿ ಸಂಗ್ರಹಿಸಲಾದ ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ಸಂಗ್ರಹಿಸಬಾರದು.
ತುಂಬಾ ತಂಪಾಗಿರಬಾರದು
ಅತಿಯಾದ ತಣ್ಣನೆಯ ತಾಪಮಾನ ಕೂಡಾ ಆಹಾರ ಕೆಡಲು ಕಾರಣವಾಗಬಹುದು. ಹೆಚ್ಚಿನ ತಾಪಮಾನದಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳು ಆಹಾರ ಪದಾರ್ಥಗಳ ಮೇಲೆ ಶೇಖರಣೆಯಾಗುತ್ತವೆ ಮತ್ತು ಅವುಗಳನ್ನು ತ್ವರಿತವಾಗಿ ನಿಮ್ಮ ಆಹಾರವನ್ನು ಕೆಡಿಸಬಹುದು.
ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕು
ಕಾಲಗಳಿಗೆ ಅನುಗುಣವಾಗಿ ಫ್ರಿಜ್ ತಾಪಮಾನವನ್ನು ಬದಲಾಯಿಸಬೇಕು. ಚಳಿಗಾಲ ಅಥವಾ ಬೇಸಿಗೆಯಲ್ಲಿ ತಾಪಮಾನವನ್ನು ವಿಭಿನ್ನವಾಗಿ ಹೊಂದಿಸಬೇಕು. ತಾಪಮಾನವನ್ನು ಬದಲಾಯಿಸುವ ಮುನ್ನ ಫ್ರಿಜ್ ಅನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಹರಡುತ್ತವೆ.