ಬೆಂಗಳೂರು : ರಾಜ್ಯದಲ್ಲಿ ‘ಹನಿಟ್ರ್ಯಾಪ್’ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿಧಾನಸೌಧದಲ್ಲಿ ‘ಹನಿಟ್ರ್ಯಾಪ್’ ನಡೆದಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಪಿಎ ಹರೀಶ್ ಅವರನ್ನು ‘ಹನಿಟ್ರ್ಯಾಪ್’ ಮಾಡಲಾಗಿದೆ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ಜನ್ಮಭೂಮಿ ಫೌಂಡೇಷನ್ ಅಧ್ಯಕ್ಷ ನಟರಾಜ್ ಶರ್ಮಾ ದೂರು ನೀಡಿದ್ದಾರೆ.
ವಿಧಾನಸೌಧ ಡಿ ದರ್ಜೆ ನೌಕರಿಯಲ್ಲಿರುವ ಮಹಿಳೆಯಿಂದ ‘ಹನಿಟ್ರ್ಯಾಪ್’ ನಡೆದಿದೆ ಎನ್ನಲಾಗಿದೆ. ಮೊದಲು ಅನೈತಿಕ ಸಂಬಂಧ ಬೆಳೆಸಿ ‘ಹನಿಟ್ರ್ಯಾಪ್’ ಮಾಡಲಾಗಿದ್ದು, ನಂತರ ಹರೀಶ್ ಅವರಿಂದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ತನಿಖೆಯಿಂದ ಆರೋಪಿಗಳು ಬಲೆಗೆ ಬೀಳಲಿದ್ದಾರೆ, ಮಹಿಳೆ ಈ ಹಿಂದೆ ಕೂಡ ಹಲವರಿಗೆ ‘ಹನಿಟ್ರ್ಯಾಪ್’ ಮಾಡಿದ್ದಾಳೆ ಎನ್ನಲಾಗಿದೆ.