ಶ್ರೀಹರಿಕೋಟಾ : ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಹೆಸರಿನ ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ರಾಕೆಟ್ ಅನ್ನು “ಸ್ಕೈರೂಟ್ ಏರೋಸ್ಪೇಸ್” ನಿರ್ಮಿಸಿದೆ.
ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆಯು ಉಡಾವಣಾ ವಾಹಕಕ್ಕೆ ವಿಕ್ರಮ್ ಎಂದು ನಾಮಕರಣ ಮಾಡಿದೆ. ವಿಕ್ರಮ್ ಸೀರಿಸ್ನಲ್ಲಿ ಒಟ್ಟು 3 ರಾಕೆಟ್ಗಳಿವೆ. ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಈ ಪ್ರಯೋಗದ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಅಧಿಕೃತವಾಗಿ ಪ್ರವೇಶ ಪಡೆದಂತಾಗಿದೆ.
India's first ever private rocket Vikram-S, named after Vikram Sarabhai, launched from Sriharikota in Andhra Pradesh. The rocket has been built by "Skyroot Aerospace". pic.twitter.com/DJ9oN0LPfH
— ANI (@ANI) November 18, 2022
ವಿಕ್ರಮ್-ಎಸ್ ರಾಕೆಟ್ ಏಕ-ಹಂತದ ಉಪ-ಕಕ್ಷೆಯ ಉಡಾವಣಾ ವಾಹನವಾಗಿದ್ದು ಅದು ಮೂರು ಗ್ರಾಹಕ ಪೇಲೋಡ್ಗಳನ್ನು ಹೊತ್ತೊಯ್ಯುತ್ತದೆ ಮತ್ತು ವಿಕ್ರಮ್ ಸರಣಿಯ ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿನ ಹೆಚ್ಚಿನ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ.