ಎಲಾನ್ ಮಸ್ಕ್(Elon Musk) ಟ್ವಿಟ್ಟರ್ಅನ್ನು ಸ್ವಾಧೀನಪಡಿಕೊಂಡ ನಂತ್ರ, ಉದ್ಯೋಗಿಗಳ ಕಡಿತದ ಬಗ್ಗೆ ಮಾಹಿತಿ ನೀಡಿದ್ದರು. ಆದ್ರೆ, ಇದೀಗ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ ಬೆನ್ನಲ್ಲೇ ಟ್ವಿಟರ್(Twitter)ನ ಎಲ್ಲಾ ಕಚೇರಿಗಳನ್ನು ಮುಚ್ಚಿದೆ.
ಎಲಾನ್ ಮಸ್ಕ್ ಉದ್ಯೋಗಿಗಳಿಗೆ ಅಲ್ಟಿಮೇಟಮ್ ನೀಡಿದ ನಂತರ ಟ್ವಿಟರ್ ಇಂಕ್ ಗುರುವಾರ ತನ್ನ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿತು. ʻಎಲಾನ್ ಮಸ್ಕ್ ಹಾರ್ಡ್ಕೋರ್ 2.0 ಎಂದು ಕರೆದಿದ್ದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಎಂಬ ಅಲ್ಟಿಮೇಟಮ್ ನಂತ್ರ ಟ್ವಿಟರ್ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆʼ ಎನ್ನಲಾಗಿದೆ.
ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಮಸ್ಕ್ಗೆ ಇದು ಹೊಸ ಹೊಡೆತವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಟ್ವಿಟರ್ನ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಟ್ವಿಟರ್ ಕಂಪನಿಯನ್ನು ವಹಿಸಿಕೊಂಡಾಗಿನಿಂದ ಮಸ್ಕ್ ಕಂಪನಿಯ 7,500 ಸಿಬ್ಬಂದಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕಂಪನಿಯಿಂದ ಹೊರ ಹೋಗಿದ್ದಾರೆ.
UPSC CSE Prelims ಎಕ್ಸಾಂಗೆ 2023 ಫೆಬ್ರವರಿ 1 ರಿಂದ ನೋಂದಣಿ ಶುರು, ವೇಳಾಪಟ್ಟಿ, ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ
UPSC CSE Prelims ಎಕ್ಸಾಂಗೆ 2023 ಫೆಬ್ರವರಿ 1 ರಿಂದ ನೋಂದಣಿ ಶುರು, ವೇಳಾಪಟ್ಟಿ, ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ