ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಕುಡಿಯುವ ಅಥವಾ ತಿನ್ನುವ ಮೊದಲು ಅಥವಾ ನಂತ್ರ ಯೋಚಿಸದೇ ಅನೇಕ ಪದಾರ್ಥಗಳನ್ನ ಸೇವಿಸ್ತಾರೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ರೆ, ಕೆಲವು ಆಹಾರಗಳ ಸಂಯೋಜನೆಯು ದೇಹಕ್ಕೆ ಹಾನಿ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಂತಹ ಒಂದು ಪದಾರ್ಥವೆಂದ್ರೆ, ಹಾಲು. ಅನೇಕ ಜನರು ಬೆಳಿಗ್ಗೆ ಹಾಲು ಕುಡಿಯುತ್ತಾರೆ. ಆದ್ರೆ, ಹಾಲು ಕುಡಿದ ನಂತ್ರ ತಪ್ಪಾಗಿಯೂ ಹೆಚ್ಚು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಮೂಲಕ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲು ಕುಡಿದ ನಂತ್ರ ಮತ್ತು ಕುಡಿಯುವ ಮೊದಲು ಸೇವಿಸಬಾರದ ಆಹಾರಗಳು ಯಾವುವು ಎಂಬುದನ್ನ ಈಗ ತಿಳಿಯೋಣ.
ಹಾಲು ಕುಡಿದ ನಂತರ ಇವುಗಳನ್ನು ತಿನ್ನಬೇಡಿ.!
ನಿಂಬೆ : ಹಾಲು ಕುಡಿದ ತಕ್ಷಣ ನಿಂಬೆ ರಸ ಅಥವಾ ನಿಂಬೆ ಉತ್ಪನ್ನಗಳನ್ನ ಸೇವಿಸಬೇಡಿ. ಇದು ಜೀರ್ಣಕಾರಿ ಸಮಸ್ಯೆಗಳನ್ನ ಹೆಚ್ಚಿಸುತ್ತದೆ. ಹಾಲು ಕುಡಿದ ತಕ್ಷಣ ನಿಂಬೆಯಿಂದ ಮಾಡಿದ ಯಾವುದನ್ನಾದರೂ ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಹಾಗೆಯೇ ನಿಂಬೆ ಹಣ್ಣಿನಿಂದ ಮಾಡಿದ ಪದಾರ್ಥ ತಿಂದ ತಕ್ಷಣ ಹಾಲು ಕುಡಿಯಬೇಡಿ.
ಮೂಲಂಗಿ: ಹಾಲು ಕುಡಿದ ತಕ್ಷಣ ಮೂಲಂಗಿಯನ್ನು ತಿನ್ನಬಾರದು. ಇದು ಜೀರ್ಣಕ್ರಿಯೆ ಮತ್ತು ಚರ್ಮದ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಹಾಗಾಗಿ ಹಾಲು ಕುಡಿದ ನಂತರ ಮೂಲಂಗಿಯನ್ನ ತಿನ್ನಬೇಡಿ ಎಂದು ಎಚ್ಚರಿಸುತ್ತಾರೆ.
ಮೀನು : ಹಾಲು ಕುಡಿಯುವ ಮೊದಲು ಅಥವಾ ನಂತರ ಮೀನು ತಿನ್ನಬೇಡಿ. ಮೀನು ತಿಂದರೆ ಚರ್ಮದ ಸಮಸ್ಯೆ ಉಂಟಾಗುತ್ತದೆ. ಹಾಲು ಕುಡಿದು ಮೀನು ತಿಂದರೆ ಜೀರ್ಣಕ್ರಿಯೆಯೂ ಹಾಳಾಗುತ್ತದೆ. ಹಾಗಾಗಿ ಹಾಲು ಕುಡಿದ ನಂತರ ಮೀನು ತಿನ್ನಬಾರದು ಎಂದು ಹೇಳಲಾಗಿದೆ.
ಸಿಟ್ರಸ್ ಹಣ್ಣುಗಳು: ಹಾಲು ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳನ್ನ ತಿನ್ನಬೇಡಿ. ಹಾಲು ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳನ್ನ ಸೇವಿಸುವುದರಿಂದ ಹಣ್ಣಿನಲ್ಲಿರುವ ಕ್ಯಾಲ್ಸಿಯಂ ಕಿಣ್ವಗಳನ್ನ ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ನಿಮ್ಮ ದೇಹವು ಯಾವುದೇ ಪೋಷಣೆಯನ್ನ ಪಡೆಯುವುದಿಲ್ಲ. ಅದಕ್ಕಾಗಿಯೇ ಕಿತ್ತಳೆ, ಅನಾನಸ್ ಮುಂತಾದ ಹುಳಿ ಹಣ್ಣುಗಳನ್ನ ಹಾಲು ಕುಡಿದ ನಂತ್ರ ತಿನ್ನಬಾರದು ಎಂದು ಹೇಳಲಾಗುತ್ತದೆ.
ಹಾಲು ಕುಡಿದ ನಂತರ ಕನಿಷ್ಠ ಒಂದು ಗಂಟೆಯಾದರೂ ಗ್ಯಾಪ್ ಇರಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.. ಇವುಗಳ ಕಾಂಬಿನೇಷನ್’ನ್ನ ಯಾವತ್ತೂ ತಿನ್ನಬೇಡಿ.
ಬಿಟಿಎಸ್-25: ಇನ್ಫಿ, ಇಂಟೆಲ್ಗೆ ‘ಕರ್ನಾಟಕ ಐಟಿ ರತ್ನ’ ಪ್ರಶಸ್ತಿ ಪ್ರದಾನ
BIGG NEWS : ಉಡಾವಣೆಗೆ ಸಜ್ಜಾದ ಭಾರತದ ಮೊದಲ ‘ಖಾಸಗಿ ರಾಕೆಟ್’ ; ನಾಳೆ ನಭಕ್ಕೆ ನೆಗೆಯಲಿದೆ ‘ವಿಕ್ರಮ್-ಎಸ್’