ಉತ್ತರಾಖಂಡ : ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ಗುರುವಾರ ಹರಿದ್ವಾರದಲ್ಲಿ 48 ಬಾಲಕರ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ 2022 ಅನ್ನು ಉದ್ಘಾಟಿಸಿದರು. ಇದೇ ವೇಳೆ ಕ್ರೀಡಾಪಟುಗಳ ಜೊತೆ ಮೈದಾಕ್ಕಿಳಿದು ಆಟವಾಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ದೇಶಾದ್ಯಂತ ತಂಡಗಳು ಭಾಗವಹಿಸುತ್ತವೆ. ನವೆಂಬರ್ 17 ರಿಂದ 20 ರವರೆಗೆ ಚಾಂಪಿಯನ್ಶಿಪ್ ನಡೆಯಲಿದೆ ಎಂದು ಈವೆಂಟ್ ಅನ್ನು ಆಯೋಜಿಸಿರುವ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್ಐ) ಪ್ರಕಟಣೆಯಲ್ಲಿ ತಿಳಿಸಿದೆ.
#WATCH हरिद्वार: उत्तराखंड के मुख्यमंत्री पुष्कर सिंह धामी ने पंतदीप हरिद्वार में 48वीं बॉयज जूनियर नेशनल जूनियर नेशनल कबड्डी चैंपियनशिप-2022 का उद्घाटन किया। इस दौरान उन्होंने कबड्डी भी खेली। pic.twitter.com/OX9cvoG6lO
— ANI_HindiNews (@AHindinews) November 17, 2022
ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಧರಿಸಿರುವ ಸಿಎಂ ಧಾಮಿಯವರು ಮೈದಾಕ್ಕಿಳಿದು ಕ್ರೀಡಾಪಟುಗಳ ಜೊತೆ ಕಬ್ಬಡ್ಡಿ ಆಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರು ಮುಖ್ಯಮಂತ್ರಿಗಳಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಕಬಡ್ಡಿ ಕ್ರೀಡೆಯಲ್ಲಿ, ಪ್ರತಿ ಬದಿಯಲ್ಲಿ ಏಳು ಆಟಗಾರರು ಇರುತ್ತಾರೆ. ಇದನ್ನು 5 ನಿಮಿಷಗಳ ವಿರಾಮದೊಂದಿಗೆ 40 ನಿಮಿಷಗಳ ಅವಧಿಗೆ (ಎರಡು 20 ನಿಮಿಷಗಳ ಸುತ್ತುಗಳು) ಆಡಲಾಗುತ್ತದೆ. ಒಂದೇ ಉಸಿರಿನಲ್ಲಿ ಸಿಕ್ಕಿಹಾಕಿಕೊಳ್ಳದೆ ಎದುರಾಳಿಯ ಅಂಗಳಕ್ಕೆ ದಾಳಿ ಮಾಡುವ ಮೂಲಕ ಮತ್ತು ಸಾಧ್ಯವಾದಷ್ಟು ಹೆಚ್ಚು ರಕ್ಷಣಾ ಆಟಗಾರರನ್ನು ಸ್ಪರ್ಶಿಸುವ ಮೂಲಕ ಅಂಕಗಳನ್ನು ಗಳಿಸಬೇಕಾಗುತ್ತದೆ.
ಆಧುನಿಕ ಕಬಡ್ಡಿ ಆಟವನ್ನು 1930 ರಿಂದ ಭಾರತದಾದ್ಯಂತ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಆಡಲಾಗುತ್ತಿದೆ.
BREAKING NEWS : ‘ವೋಟರ್ ಐಡಿ’ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ : ‘ಚಿಲುಮೆ’ ಸಂಸ್ಥೆ ವಿರುದ್ಧ ‘FIR’ ದಾಖಲು