ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬಾಳಾ ಠಾಕ್ರೆಯವರ ಪುಣ್ಯತಿಥಿಯ ಸಂದರ್ಭದಲ್ಲಿ, ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಬಾಳಾಸಾಹೇಬ್ ಅವರು ಏಕೈಕ ‘ಹಿಂದೂ ಹೃದಯ ಸಾಮ್ರಾಟ್’ಎಂದು ಹೇಳಿದ್ದು, ಪಕ್ಷದ ಸಂಸ್ಥಾಪಕರಿಗೆ ಭಾರತ ರತ್ನ ನೀಡುವಂತೆ ಒತ್ತಾಯಿಸಿದ್ದಾರೆ.
ಅವರಿಗೆ ನಿಜವಾಗಿಯೂ ಹಿಂದುತ್ವದ ಬಗ್ಗೆ ಗೌರವವಿದ್ದರೆ, ವೀರ್ ಸಾವರ್ಕರ್ ಜೊತೆಗೆ ಬಾಳಾಸಾಹೇಬ್ ಠಾಕ್ರೆಯವರಿಗೂ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಬೇಕು. ಅವರು ಅದನ್ನು ಏಕೆ ಘೋಷಿಸುತ್ತಿಲ್ಲ? ಕಳೆದ ಹದಿನೈದು ವರ್ಷಗಳಿಂದ ನಾವು ಈ ಬೇಡಿಕೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಕೆಲವು ಜನರ ರಾಜಕೀಯ ಲಾಭಕ್ಕಾಗಿ ಹಲವು ರಾಜ್ಯ ನಾಯಕರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ವಾಸ್ತವವಾಗಿ, ಭಾರತ ರತ್ನ ಪ್ರಶಸ್ತಿಯಿಂದ ವೀರ್ ಸಾವರ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸ್ಥಾನಮಾನವು ಹೆಚ್ಚಾಗುವುದಿಲ್ಲ. ಆದರೆ ಅಂತಹ ಮಹಾನ್ ನಾಯಕರಿಗೆ ನೀಡಿದ ನಂತರ ಪ್ರಶಸ್ತಿಯ ಮಹತ್ವವು ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ವೀರ್ ಸಾವರ್ಕರ್ ಬಗ್ಗೆ ನಕಲಿ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುವುದನ್ನು ನಿಲ್ಲಿಸಿ, ಸಾಧ್ಯವಾದಷ್ಟು ಬೇಗ ಪ್ರಶಸ್ತಿಯನ್ನು ಘೋಷಿಸಿ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ತು ಒತ್ತಾಯಿಸಿದ್ದಾರೆ.