ಮೈಸೂರು: ಪ್ರಧಾನಿ ಮೋದಿ ಅವರಿಂದಲೇ ಬೆನ್ನಿಗೆ ಗುದ್ದು ಕೊಡಿಸಿಕೊಂಡ ರಾಮದಾಸ್ ಅವರಿಗೆ ಕಿರುಕುಳ ಕೊಡುವ ಶಕ್ತಿ ನನಗೆ ಎಲ್ಲಿದೆ ಹೇಳಿ ಎಂದು ಶಾಸಕ ಎಸ್.ಎ.ರಾಮದಾಸ್ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
BIG NEWS: ನಾನು ರಾಜಕೀಯ ಬಿಟ್ಟರೂ ಮಂಡ್ಯ ಬಿಡೋದಿಲ್ಲ – ಸಂಸದೆ ಸುಮಲತಾ ಅಂಬರೀಶ್
ಗುಂಬಜ್ ಮಾದರಿಯಲ್ಲಿ ಮೈಸೂರು ಬಸ್ ನಿಲ್ದಾಣ ನಿರ್ಮಾಣ ವಿವಾದದ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ರಾಮದಾಸ್ ಆರೋಪಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
BIG NEWS: ನಾನು ರಾಜಕೀಯ ಬಿಟ್ಟರೂ ಮಂಡ್ಯ ಬಿಡೋದಿಲ್ಲ – ಸಂಸದೆ ಸುಮಲತಾ ಅಂಬರೀಶ್
ರಾಮದಾಸ್ ನಮ್ಮ ಹಿರಿಯ ನೇತಾರರು. ಗುಂಬಜ್ ಹೊಡೆದರೆ ಟಿಪ್ಲು ಅನುಯಾಯಿಗಳಿಗೆ ಕಿರುಕುಳ ಆಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನಿಸುವುದಿಲ್ಲ. ರಾಮದಾಸ್ ಅವರು ಯಾವ ಅರ್ಥದಲ್ಲಿ ತಮಗೆ ಕಿರುಕುಳ ಆಗಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನ ರಾಜಕಾರಣಿಗಳ ಬಳಿ ನನ್ನನ್ನೆ ಸುಟ್ಟು ಹಾಕುವಷ್ಟು ಹಣವಿದೆ. ಅವರಿಗೆ ಕಿರುಕುಳ ಕೊಡುವಷ್ಟು ಶಕ್ತಿವಂಥ ನಾನಲ್ಲ. ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ ಎಂದರು.