ಹೈದರಾಬಾದ್: ಭಿಕ್ಷೆ ಬೇಡುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಆಂಧ್ರಪ್ರದೇಶದ ತುಲಿಯಲ್ಲಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪೊಲ್ನಾಟಿ ಶೇಷಗಿರಿ ರಾವ್ ಅವರ ಮನೆಯಗೆ ಬಂದು, ರಾವ್ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ಘಟನೆಯ ದೃಶ್ಯಾವಳಿ ರಾವ್ ಮನೆ ಅಳವಡಿಸಲಾಗಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ದಾಳಿಕೋರ ದಾರ್ಶನಿಕರ ವೇಷ ಧರಿಸಿರುವುದನ್ನು ನೋಡಬಹುದು. ಆತನಿಗೆ ರಾವ್ ತನ್ನ ಮನೆಯ ಪ್ರವೇಶದ್ವಾರದಲ್ಲಿ ಕೆಲವು ಧಾನ್ಯಗಳನ್ನು ನೀಡುತ್ತಿರುವಾಗ ರಾವ್ ಮೇಲೆ ಕಿಡಿಗೇಡಿ ಕುಡುಗೋಲಿನಿಂದ ಹಲ್ಲೆ ನಡೆಸಿ, ಅಲ್ಲಿಂದ ಎಸ್ಕೇಪ್ ಆಗುವುದನ್ನು ನೋಡಬಹುದು.
Cinematic attack caught on camera in #Tuni #Kakinada #AndhraPradesh … Attacker came dressed as holyman, seeking alms, suddenly took out weapon and attacked #TeluguDesam leader #PolnatiSheshagiriRao on head & neck, grievously injuring him, then escaped on bike @ndtv @ndtvindia pic.twitter.com/BisGrR2FhN
— Uma Sudhir (@umasudhir) November 17, 2022
ಘಟನೆಯಲ್ಲಿ ರಾವ್ ಅವರ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಮೋಟಾರು ಬೈಕ್ನಲ್ಲಿ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS : ಮಹಾರಾಷ್ಟ್ರದ ಈ ಗ್ರಾಮದ ‘ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧ’..! | Banned Use Of Mobile Phones
BIGG NEWS : ಮಹಾರಾಷ್ಟ್ರದ ಈ ಗ್ರಾಮದ ‘ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ನಿಷೇಧ’..! | Banned Use Of Mobile Phones