ಬೆಂಗಳೂರು: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
BREAKING NEWS: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅಧಿಕಾರ ದುರ್ಬಳಕೆ: ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 40% ಕಮಿಷನ್ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗುತ್ತಿದೆ. ಕೇವಲ ಗುತ್ತಿಗೆಯಲ್ಲಿ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದೀಗ ಪ್ರಜಾಪ್ರಭುತ್ವದ ವಿಷಯದಲ್ಲೂ ಹಗರಣ ನಡೆಯುತ್ತಿದೆ. ಇಂಥದ್ದೊಂದು ಅಕ್ರಮ ಹಿಂದೆಂದೂ ನಡೆದಿರಲಿಲ್ಲ. 40% ಕಮಿಷನ್ ಸರ್ಕಾರ ಜನರ ದುಡ್ಡನ್ನು ಕಳ್ಳತನ ಮಾಡಿದೆ. ಈ ಸರ್ಕಾರ ಚುನಾವಣಾ ಹಕ್ಕನ್ನೂ ಕದಿಯುವ ಪ್ರಯತ್ನ ಮಾಡಿದೆ. ಮಾಹಿತಿ ಕಳ್ಳತನ, ಬಿಬಿಎಂಪಿಯ ಅಕ್ರಮ ಇದೀಗ ಬಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.
BREAKING NEWS: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅಧಿಕಾರ ದುರ್ಬಳಕೆ: ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಇನ್ನು ಸಿಎಂ ಬಸವರಾಜ ಬೊಮ್ಮಾಯಿ, ಅಶ್ವತ್ಥ ನಾರಾಯಣ ಹಾಗೂ ಈ ಸಂಸ್ಥೆಗಳಿಗೆ ಏನು ಸಂಬಂಧ? ಅಕ್ರಮದ ಅನುಮಾನ ಇರುವ ವ್ಯಕ್ತಿ ಜೊತೆಗೆ ಸಿಎಂ ಹಾಗೂ ಸಚಿವರ ಸಂಬಂಧ ಏನಿದೆ? ಸಿಎಂ ಬೊಮ್ಮಾಯಿ ತಕ್ಷಣ ರಾಜೀನಾಮೆ ನೀಡಬೇಕು. ಚುನಾವಣಾ ಆಯೋಗ ಚುನಾವಣಾ ಅಕ್ರಮ ಎಸಗಿದವರ ವಿರುದ್ದ ಕ್ರಮ ಜರುಗಿಸಬೇಕು. ಸಿಎಂ ಬೊಮ್ಮಾಯಿ ಕಂಬಿ ಹಿಂದೆ ಹೋಗಲೇಬೇಕು. ಮತದಾರರ ಪಟ್ಟಿ ನವೀಕರಣಕ್ಕೆ ಯಾಕೆ ಇದೇ ಸಂಸ್ಥೆಗೆ ಅನುಮತಿ ನೀಡಲಾಗಿದೆ? ಖಾಸಗಿ ಏಜೆನ್ಸಿಗೆ ಕನ್ನಡಿಗರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡಲು ಅವಕಾಶ ನೀಡಲಾಗಿದೆ. ಇದು ಖಾಸಗಿತನದ ವಂಚನೆಯ ಪ್ರಕರಣ. ಗುತ್ತಿಗೆ ನೌಕರರು ಹೇಗೆ ಸರ್ಕಾರಿ ನೌಕರರಂತೆ ಬೂತ್ ಲೆವೆಲ್ ಆಫಿಸರ್ ಐಡಿ ಕಾರ್ಡ್ ನೀಡಲಾಗುತ್ತದೆ? ಖಾಸಗಿ ವೈಯಕ್ತಿಕ ಡೇಟಾಗಳು ಕಮರ್ಷಿಯಲ್ ಆ್ಯಪ್ ಗೆ ಹೇಗೆ ಮಾರಾಟ ಮಾಡಲಾಗ್ತಿದೆ? ಎಂದು ರಣದೀಪ್ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ.