ಬೆಂಗಳೂರು : ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕ್ಯಾಸಿನೋ ದಂಧೆ ಆರೋಪದ ಮೇಲೆ ಉದ್ಯಮಿ ಹಾಗೂ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲು ಆಗುತ್ತಿದ್ದಂತೆ ಕೆ.ಸಿ. ವೀರೇಂದ್ರ (ಪಪ್ಪಿ) ವಿದೇಶಕ್ಕೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ಕೆ.ಸಿ.ವೀರೇಂದ್ರ ಅವರ ಮೇಲೆ ಕೇಸ್ ದಾಖಲಾಗಿದೆ.
ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ಆಡಿದ್ದರು ಎನ್ನುವ ಆರೋಪವಿದೆ. ಅಕ್ಟೋಬರ್ 20ರಂದು ಪಂದ್ಯ ನಡೆದಿದ್ದು, ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ ಮೂಲಕ ಹಣ ಸಂಗ್ರಹ ಮಾಡಲಾಗಿದೆ ಎನ್ನುವುದು ಬಯಲಾಗಿದೆ. ಈ ಸಂಬಂಧ ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ ಮತ್ತು ಪಪ್ಪಿ ವಿರುದ್ಧ ವೆಂಕಟೇಶ್ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೂ, ಕೆ.ಸಿ.ವೀರೇಂದ್ರ ಬ್ಯಾಂಕ್ ಅಕೌಂಟ್ ಸೀಜ್ ಆಗಿದ್ದು, ಹಾಗೂ ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್ಗಳ ಅಕೌಂಟ್ ಕೂಡ ಸೀಜ್ ಆಗಿದೆ. ವೀರೇಂದ್ರ ಈಗಾಗಲೇ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಈಗಾಗಲೇ ಲುಕ್ಔಟ್ ನೋಟಿಸ್ ಜಾರಿ ಆಗಿದೆ. ಯಾವುದೇ ಏರ್ ಫೋರ್ಟ್ಗೆ ಬಂದರೂ ತಕ್ಷಣ ಬಂಧಿಸಲು ಸೂಚನೆ ನೀಡಲಾಗಿದೆ.
BREAKING NEWS : ‘ಹಿಮಾಚಲ ಪ್ರದೇಶ’ದಲ್ಲಿ ಪ್ರಬಲ ಭೂಕಂಪ ; ಭಯಗೊಂಡು ಮನೆಯಿಂದ ಹೊರ ಓಡಿ ಬಂದ ಜನ |Earthquake
BREAKING NEWS : ‘ಹಿಮಾಚಲ ಪ್ರದೇಶ’ದಲ್ಲಿ ಪ್ರಬಲ ಭೂಕಂಪ ; ಭಯಗೊಂಡು ಮನೆಯಿಂದ ಹೊರ ಓಡಿ ಬಂದ ಜನ |Earthquake