ಚಿತ್ರದುರ್ಗ : ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದ್ದು, ಸದ್ಯ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದರ ನಡುವೆ ಮೈಸೂರಿನ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ತಂದೆ, ಚಿಕ್ಕಪ್ಪನಿಂದ ಬಾಲಕಿ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮುರುಘಾ ಶ್ರೀಗಳು ನಮಗೆ ಹಣದ ಸಹಾಯ ಮಾಡಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ, ಅವರ ವಿರುದ್ಧ ಕೇಸ್ ಮುಂದುವರೆಸುವುದು ಬೇಡ ಎಂದು ಸಂತ್ರಸ್ತೆ ಬಾಲಕಿ ತಂದೆ, ಚಿಕ್ಕಪ್ಪನಿಂದ ಬಾಲಕಿ ಒತ್ತಡವಿತ್ತು, ಒಡನಾಡಿ ಸಂಸ್ಥೆಯ ಕೌನ್ಸೆಲಿಂಗ್ ವೇಳೆ ವಿಚಾರ ಬಯಲಾಗಿದೆ ಎಂದು ಆರೋಪಿಸಿ ಸ್ಟ್ಯಾನ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಾಲಕಿ ತಂದೆ, ಚಿಕ್ಕಪ್ಪನ ಜೊತೆ ಹೋಗುವುದಿಲ್ಲ ಎಂದು ಹೇಳಿದರೂ ಬಲವಂತವಾಗಿ ಆಕೆಯನ್ನು ಕಳುಹಿಸಲಾಗಿದೆ. ಈ ವಿಚಾರ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ , ಬಾಲಕಿ ತಂದೆ, ಹಾಗೂ ಚಿಕ್ಕಪ್ಪನನ್ನು ವಿಚಾರಣೆಗೊಳಪಡಿಸಿ ಎಂದು ದೂರು ನೀಡಿದ್ದಾರೆ.
BIGG NEWS : ‘ಸಿದ್ದರಾಮಯ್ಯ 75’ ಕಾರ್ಯಕ್ರಮದಲ್ಲಿ ಬ್ರಾಹ್ಮಣರಿಗೆ ಅವಹೇಳನ : ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
ಶಿವಮೊಗ್ಗ: ನ.18, 19ರಂದು ಜಿಲ್ಲೆ ಈ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ | Water Supply