ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿದಿನ ಸಾವಿರಾರು ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದೇ ವೇಳೆ ರೈಲ್ವೇ ಪ್ಲಾಟ್ಫಾರ್ಮ್ನಲ್ಲಿ ಜನಜಂಗುಳಿ ಹೆಚ್ಚಾಗಿದ್ದಾಗ ಟಿಕೆಟ್ ಲಭ್ಯವಾಗದೇ, ರೈಲು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಆನೇಕರು ಟಿಕೆಟ್ ಇಲ್ಲದೇ ರೈಲು ಹತ್ತುತ್ತಾರೆ. ಆದಾಗ್ಯೂ, ನೀವು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ್ರೆ ನಿಮಗೆ ದಂಡ ವಿಧಿಸಬಹುದು. ಹಾಗಾಗಿ ನೀವು ರೈಲು ಹತ್ತಿದ ನಂತರವೂ ಕಾಯ್ದಿರಿಸದ ರೈಲು ಟಿಕೆಟ್ ಬುಕ್ ಮಾಡುವ ವಿಧಾನವನ್ನ ತಿಳಿದುಕೊಳ್ಳುವುದು ಒಳ್ಳೆಯದು.
UTS ಅಪ್ಲಿಕೇಶನ್.!
ಆನ್ಲೈನ್ ಕಾಯ್ದಿರಿಸದ ರೈಲು ಟಿಕೆಟ್ ಬುಕಿಂಗ್ ಸೌಲಭ್ಯವನ್ನ ರೈಲ್ವೆ ಯುಟಿಎಸ್ ಅಪ್ಲಿಕೇಶನ್ನಲ್ಲಿ ಒದಗಿಸಿದೆ. UTS ಅಪ್ಲಿಕೇಶನ್ ಮೂಲಕ, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲು ಹತ್ತಿದ ನಂತರವೂ ಆನ್ಲೈನ್ನಲ್ಲಿ ಕಾಯ್ದಿರಿಸದ ರೈಲು ಟಿಕೆಟ್ಗಳನ್ನ ತೆಗೆದುಕೊಳ್ಳಬೋದು.
ಉಚಿತವಾಗಿ ಡೌನ್ಲೋಡ್ ಮಾಡಿ.!
ಮೊಬೈಲ್ ಅಪ್ಲಿಕೇಶನ್ ಯುಟಿಎಸ್ ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಆವೃತ್ತಿಗಳೊಂದಿಗೆ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅದನ್ನ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ಟಿಕೆಟ್ ಪಾವತಿಯನ್ನ ಆನ್ಲೈನ್ನಲ್ಲೇ ಮಾಡಬಹುದು. ರೈಲ್ವೆ ಒದಗಿಸುವ ಈ ಸೌಲಭ್ಯದೊಂದಿಗೆ ಕಾಯ್ದಿರಿಸದ ಟಿಕೆಟ್ಗಳು ಮತ್ತು ಪ್ಲಾಟ್ಫಾರ್ಮ್ ಟಿಕೆಟ್ಗಳನ್ನ ಬುಕ್ ಮಾಡಬಹುದು.
UTS ನಿಂದ ಕಾಯ್ದಿರಿಸದ ಟಿಕೆಟ್ ಬುಕ್ ಮಾಡುವುದು ಹೇಗೆ.?
* ಮೊದಲು UTS ಅಪ್ಲಿಕೇಶನ್ಗೆ ಹೋಗಿ.
* ಸಾಮಾನ್ಯ ಬುಕಿಂಗ್ ಆಯ್ಕೆಯನ್ನು ಆಯ್ಕೆಮಾಡಿ.
* ನಂತರ ನಿರ್ಗಮನ ನಿಲ್ದಾಣದ ಹೆಸರು/ಕೋಡ್, ತಲುಪಬೇಕಾದ ನಿಲ್ದಾಣದ ಹೆಸರು/ಕೋಡ್ ಅನ್ನು ನಮೂದಿಸಿ.
* ಪ್ರಯಾಣಿಕ, ಮೇಲ್ ಅಥವಾ ಎಕ್ಸ್ಪ್ರೆಸ್ನಂತಹ ಟಿಕೆಟ್ ಪ್ರಕಾರವನ್ನು ಆಯ್ಕೆಮಾಡಿ.
* ಪೇಪರ್ ಮತ್ತು ಪೇಪರ್ ಲೆಸ್ ಆಯ್ಕೆಯನ್ನು ಆರಿಸಬೇಕು.
* ವಾಲೆಟ್ ಅಥವಾ ಇತರ ಆನ್ಲೈನ್ ಪಾವತಿ ವಿಧಾನಗಳಿಂದ ಪಾವತಿ ವಿಧಾನವನ್ನು ಆಯ್ಕೆಮಾಡಿ.
* ನಿಮ್ಮ ಟಿಕೆಟ್ ಬುಕಿಂಗ್ ಕುರಿತು ನೀವು ಸಂದೇಶವನ್ನು ಪಡೆಯುತ್ತೀರಿ.
* UTS ಡ್ಯಾಶ್ಬೋರ್ಡ್ನಲ್ಲಿ ನಿಮ್ಮ ಟಿಕೆಟ್ ವೀಕ್ಷಿಸಬಹುದು.
ವಿಭಿನ್ನ ಲವ್ ಸ್ಟೋರಿ ; ಡಿಕ್ಕಿ ಹೊಡೆದಾಗ ಪ್ರೇಮಾಂಕುರವಾಯ್ತು, 70 ವರ್ಷದ ವ್ಯಕ್ತಿ ಜೊತೆ 19 ವರ್ಷದ ಯುವತಿ ಮದುವೆ
BIGG NEWS: ಕೋಲಾರದಲ್ಲಿ ಸಿದ್ದರಾಮಯ್ಯಗೆ ಒಳ್ಳೆಯದಾಗಲ್ಲ: ಭವಿಷ್ಯ ನುಡಿದ ಸುಧಾಕರ್