ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೆಳಗಿನ ಜಾವ ವಾಕಿಂಗ್ ಹೋದಾಗ 19 ವರ್ಷದ ಯುವತಿಯೊಬ್ಬಳು 70 ವರ್ಷದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಅವರಿಬ್ಬ ನಡುವೆ ಪ್ರೇಮಾಂಕುರವಾಗಿದೆ. ನಂತ್ರ ಅವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು, ಸಧ್ಯ ಮದುವೆಯೂ ಆಗಿದ್ದಾರೆ.
ಲಿಯಾಖತ್ ಅನ್ನೋ 70 ವರ್ಷದ ವ್ಯಕ್ತಿ ಮತ್ತು ಯುವತಿ ಶಮೈಲಾ ಲಾಹೋರ್ನಲ್ಲಿ ವಾಸಿಸುತ್ತಿದ್ದಾರೆ. ಸಧ್ಯ ಲಿಯಾಖತ್ ಅಲಿ ಲವ್ ಸ್ಟೋರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲ ಭೇಟಿಯ ಬಗ್ಗೆ ಲಿಯಾಖತ್, ‘ಒಂದು ಬಾರಿ ಅವಳು (ಶಮೈಲಾ) ಹೋಗುತ್ತಿದ್ದಳು, ಹಾಗಾಗಿ ನಾನು ಹಿಂದಿನಿಂದ ಹಾಡು ಗುನುಗಲು ಪ್ರಾರಂಭಿಸಿದೆ. ಆಕೆ ನನ್ನತ್ತ ಹಿಂತಿರುಗಿ ನೋಡಿದ್ಲು. ಆಗ್ಲೇ ನನ್ನ ಹೃದಯಲ್ಲಿ ಪ್ರೀತಿ ಹುಟ್ಟಿತು ಎಂದರು.
ಮತ್ತೊಂದೆಡೆ, ಶಾಮೈಲಾಗೆ ಲಿಯಾಖತ್ ಅಲಿ ನಿನಗಿಂತ ತುಂಬಾ ದೊಡ್ಡವರಲ್ಲವೇ ಎಂದು ಪ್ರಶ್ನಿಸಿದ್ರೆ, “ನೋಡಿ, ಪ್ರೀತಿಯಲ್ಲಿ ವಯಸ್ಸು ಕಾಣೋದಿಲ್ಲ, ಅದು ಪ್ರೀತಿ ಆಗುತ್ತೆ. ಇದರಲ್ಲಿ ವಯಸ್ಸು ಯಾವುದು, ಜಾತಿ ಯಾವುದು ಅಂತಾ ಕಾಣುವುದಿಲ್ಲ. ಕೇವಲ ಪ್ರೀತಿ ಎಂದು ಕಾಣುವುದು.
ಮತ್ತೊಂದೆಡೆ ಲಿಯಾಖತ್ ಅಲಿ ಕೂಡ ಈ ವಿಚಾರದಲ್ಲಿ ಹೌದು ಎನ್ನುತ್ತಲೇ ಹೃದಯ ಯೌವನವಾಗಿರಬೇಕು, ವಯಸ್ಸಿನಲ್ಲಿ ಏನಿದೆ? ಈ ಸಂಬಂಧಕ್ಕೆ ಕುಟುಂಬಸ್ಥರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ, ಮನವರಿಕೆ ಮಾಡಿಕೊಟ್ಟಿದ್ದರು ಎಂದು ಶಾಮೈಲಾ ಹೇಳುತ್ತಾರೆ.
ನಂತರ ಕುಟುಂಬಸ್ಥರು ನೀವು ಜನ ರೆಡಿ ಆಗಿದ್ದರೆ ನಾವೇನು ಮಾಡಲು ಸಾಧ್ಯ ಎಂದರು. ಈ ವರ್ಷದ ಆರಂಭದಲ್ಲಿ ತಾವು ಮದುವೆಯಾಗಿದ್ದೇವೆ ಎಂದು ದಂಪತಿಗಳು ತಿಳಿಸಿದ್ದಾರೆ.
ವಯಸ್ಸಿನ ಅಂತರದ ದಂಪತಿಗಳು ಮದುವೆಯಾಗಬೇಕೇ ಎಂದು ಲಿಯಾಖತ್ ಕೇಳಿದ್ರೆ, ಪ್ರತಿಯೊಬ್ಬರಿಗೂ ಅವರವರ ಆಶಯದಂತೆ ಬದುಕುವ ಹಕ್ಕು ಇದೆ ಎಂದು ಹೇಳಿದರು.
ರೊಮ್ಯಾಂಟಿಕ್ ಆಗಿರಲು ವಯಸ್ಸಿನ ಮಿತಿ ಇಲ್ಲ ಎನ್ನುವ ಲಿಯಾಖತ್, ಪ್ರತಿಯೊಂದು ಯುಗಕ್ಕೂ ತನ್ನದೇ ಆದ ಪ್ರಣಯವಿದೆ. ಇಡೀ ಜೀವನವನ್ನು ಎಂಜಾಯ್ ಮಾಡಿದ್ದೇನೆ ಎಂದು ಹೇಳಿದ್ರೆ, ಲಿಯಾಖತ್ ಜೊತೆ ತುಂಬಾ ಖುಷಿಯಾಗಿದ್ದೇನೆ ಎನ್ನುತ್ತಾರೆ ಶಮೈಲಾ.
BREAKING: ಶಿವಾಜಿನಗರ ಕ್ಷೇತ್ರದಿಂದ ‘ಕಾಂಗ್ರೆಸ್ ಟಿಕೆಟ್’ಗಾಗಿ ಮೊಹಮ್ಮದ್ ನಲಪಾಡ್ ಅರ್ಜಿ ಸಲ್ಲಿಕೆ
ಪತಿ ತನ್ನ ಮಾತು ಕೇಳ್ತಿಲ್ಲ ಅಂತಾ ‘ಬ್ಲ್ಯಾಕ್ ಮ್ಯಾಜಿಕ್’ ಮೊರೆಯೋದ ಪತ್ನಿ, ಮುಂದಾಗಿದ್ದು ಮಾತ್ರ ಅಯ್ಯೋ ಪಾಪ