ಮುಂಬೈ : ಮುಂಬೈನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಉದ್ಯಮಿ ಪತಿಯನ್ನ ನಿಯಂತ್ರಿಸಲು ಬ್ಲ್ಯಾಕ್ ಮ್ಯಾಜಿಕ್ ಮೊರೆಯೋಗಿದ್ದು, ಸಧ್ಯ ದಿಕ್ಕು ತೋಚದಂತಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಇಷ್ಟಕ್ಕೂ ಏನಿದು ಪ್ರಕರಣ.? ನಡೆದಿದ್ದಾದ್ರು ಏನು.? ಮುಂದೆ ಓದಿ.
ಮಾಹಿತಿ ಪ್ರಕಾರ, ಮಹಿಳೆಯೊಬ್ಬಳು ಬಗ್ಗು ಬಡೆಯಲು ಬ್ಲ್ಯಾಕ್ ಮ್ಯಾಜಿಕ್ ಮೊರೆಯೋಗಿದ್ದಾಳೆ. ಇದಕ್ಕೆ ತನ್ನ ಮಾಜಿ ಪ್ರಿಯರಕನ ಜೊತೆ ಸೇರಿ ಜ್ಯೋತಿಷಿ ಜ್ಯೋತಿಶ್ ಬಾದಲ್ ಶರ್ಮಾ ಸಹಾಯ ಬೇಡಿದ್ದಾಳೆ. ಅದ್ರಂತೆ, ಜೋತಿಷ್ಯಿ ಇದಕ್ಕಾಗಿ ಆತ ಉದ್ಯಮಿಯ ಪತ್ನಿಯಿಂದ 24 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 35 ಲಕ್ಷ ರೂಪಾಯಿ ಮೌಲ್ಯದ ನಗದನ್ನ ತೆಗೆದುಕೊಂಡಿದ್ದಾನೆ. ನಂತ್ರ ಆಕೆಗೆ ತಾನು ಮೋಸ ಹೋಗಿರುವ ಸಂಗತಿ ಗೊತ್ತಾಗಿದೆ.
ಅಸಲಿಗೆ ಈ ಕೆಲಸದಲ್ಲಿ ಜ್ಯೋತಿಶ್ ಬಾದಲ್’ಗೆ ಮಹಿಳೆಯ ಮಾಜಿ ಗೆಳೆಯ ಪರೇಶ್ ಸಹಾಯ ಮಾಡಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹದಿಮೂರು ವರ್ಷಗಳ ಹಿಂದೆ ಉದ್ಯಮಿಗೆ ಪತ್ನಿಯ ಅನೈತಿಕ ವಿಚಾರ ತಿಳಿದಾಗ, ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ನೊಂದಿದ್ದ ಉದ್ಯಮಿಯ ಪತ್ನಿ ಆತನನ್ನ ನಿಯಂತ್ರಿಸಲು ಬಯಸಿದ್ದಳು. ಹೀಗಾಗಿ ಪತಿಯನ್ನ ನಿಯಂತ್ರಿಸಲು ಮ್ಯಾಜಿಕ್ ಮಾಡುವುದಾಗಿ ಜ್ಯೋತಿಶ್ ಬಾದಲ್ ಹೇಳಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಯಾಕಂದ್ರೆ, ಆಕೆಯ ಪತಿ ತನ್ನ ಸಹೋದರ ಮತ್ತು ಕುಟುಂಬದ ಸದಸ್ಯರ ಮಾತನ್ನ ಮಾತ್ರ ಕೇಳುತ್ತಿದ್ದನಂತೆ.
38 ವರ್ಷದ ಮಹಿಳೆ ತಾನು ಜ್ಯೋತಿಶ್ ಬಾದಲ್ ಶರ್ಮಾ’ನನ್ನ ಸಾಮಾಜಿಕ ಮಾಧ್ಯಮದ ಮೂಲಕ ಭೇಟಿಯಾಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ದೀಪಾವಳಿಯಂದು ಉದ್ಯೋಗಿಗಳಿಗೆ ಸಂಬಳ ನೀಡಲು ಈ ಹಣವನ್ನ ಮನೆಯಲ್ಲಿಟ್ಟಿದ್ದರು ಎಂದು ಮಹಿಳೆಯ ಪತಿ ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. ಸಂಬಳ ಕೊಡುವ ಸಮಯ ಬಂದಾಗ ಬೀರು ತೆರೆದು ನೋಡಿದಾಗ ಅದರಲ್ಲಿ 35 ಲಕ್ಷ ರೂ. ಇರಲಿಲ್ಲ ಎಂದು ಉದ್ಯಮಿ ಹೇಳಿದ್ದಾರೆ.
ಈ ಬಗ್ಗೆ ಪತ್ನಿಯನ್ನ ಕೇಳಿದಾಗ ಪ್ರಶ್ನಿಸಿದಾಗ ಮೊದ ಮೊದಲು ಆಕೆ ಏನನ್ನೂ ಹೇಳಿಲ್ಲ. ನಂತ್ರ ವಿಷ್ಯ ಗಂಭೀರವಾದಾಗ ಇಡೀ ವಿಷಯ ಬಾಯಿ ಬಿಟ್ಟಿದ್ದಾಳೆ. ಇದನ್ನು ಕೇಳಿ ಆತ ಅಕ್ಷರಶಃ ಶಾಕ್ ಆಗಿದ್ದು, ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದಾನೆ. ಸಧ್ಯ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.
BREAKING: ಶಿವಾಜಿನಗರ ಕ್ಷೇತ್ರದಿಂದ ‘ಕಾಂಗ್ರೆಸ್ ಟಿಕೆಟ್’ಗಾಗಿ ಮೊಹಮ್ಮದ್ ನಲಪಾಡ್ ಅರ್ಜಿ ಸಲ್ಲಿಕೆ