ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಶೀಘ್ರವೇ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬಸ್ ಯಾತ್ರೆ ನಡೆಸಲಿದೆ.
Ola Scooty Scam: ಆನ್ ಲೈನ್ ಓಲಾ ಸ್ಕೂಟಿ ಹಗರಣದಲ್ಲಿ 1,000ಕ್ಕೂ ಹೆಚ್ಚು ಮಂದಿ ವಂಚನೆ, 20 ಮಂದಿ ಬಂಧನ
ಈ ಕುರಿತು ಮಾಹಿತಿ ನೀಡಿರುವ ಸಿದ್ದರಾಮಯ್ಯ, ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಯಾತ್ರೆಗೆ ಬಸ್ ಸಿದ್ದವಾಗುತ್ತಿದ್ದು, ನಾನೊಂದು ಟೀಂ, ಡಿ.ಕೆ. ಶಿವಕುಮಾರ್ ಒಂದು ಟೀಂ ಹೋಗಿ ಪ್ರಚಾರ ಮಾಡುತ್ತೇವೆ. ಬಸ್ ಯಾತ್ರಗೆ ದಿನಾಂಕ ನಿಗದಿಗೆ ನಾನೇನು ಜ್ಯೋತಿಷ್ಯ ನೋಡಲ್ಲ ಎಂದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಟ್ವಿಟರ್, ಮೇಟಾ ಬಳಿಕ 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾದ Amazon