ಐಜ್ವಾಲ್: ಮಿಜೋರಾಂನಲ್ಲಿ ಕಲ್ಲು ಕ್ವಾರಿ ಕುಸಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, ನಾಲ್ವರು ಕಾರ್ಮಿಕರ ಪತ್ತೆಗಾಗಿ ಇನ್ನೂ ಶೋಧ ಕಾರ್ಯ ಮುಂದುವರೆದಿದೆ. ನಿನ್ನೆ ನಡೆದ ಈ ಘಟನೆಯ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಕ್ವಾರಿ ಬಳಿ ಕೆಲಸ ಮಾಡುತ್ತಿದ್ದ ಜೆಸಿಬಿ, ಟ್ರಕ್ಗಳ ಮೇಲೆ ಗುಡ್ಡ ಕುಸಿದಿದೆ. ಈ ವೇಳೆ ಅಲ್ಲಿದ್ದ ಕೆಲ ಕಾರ್ಮಿಕರು ಮಣ್ಣಿನಡಿ ಸಮಾಧಿಯಾಗಿದ್ದಾರೆ. ಇನ್ನುಳಿದವರು ತಮ್ಮ ಪ್ರಾನ ರಕ್ಷಣೆಗಾಗಿ ಗಾಬರಿಯಿಂದ ದಿಕ್ಕಾಪಾಲಾಗಿ ಓಡುವುದನ್ನು ನೋಡಬಹುದು.
Shocking and disturbing video… Video shot when accident happened.Several laborers feared trapped after a stone quarry collapses in #Mizoram pic.twitter.com/AbqJHRrLOV
— DINESH SHARMA (@medineshsharma) November 14, 2022
ನಿನ್ನೆ ಮಿಜೋರಾಂನ ಹ್ನಾಥಿಯಾಲ್ ಗ್ರಾಮದ ಬಳಿ ಇದ್ದ ಕಲ್ಲು ಕ್ವಾರಿಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕ್ವಾರಿ ಕುಸಿದು ಕ್ವಾರಿಗೆ ಮಣ್ಣು ಆವರಿಸಿದೆ. ಏಕಾಏಕಿ ಮಣ್ಣು ಕುಸಿದ ಪರಿಣಾಮ ಕ್ವಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದರು. ಇದೀಗ ಅವರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ.
ಘಟನೆ ವೇಳೆ ಮಣ್ಣಿನಡಿ ಡ್ರಿಲ್ಲಿಂಗ್ ಯಂತ್ರಗಳು ಹೂತುಹೋಗಿವೆ. 5ಕ್ಕೂ ಹೆಚ್ಚು ಜೆಸಿಬಿಗಳು (JCB) ಮಣ್ಣು ತೆರವುಗೊಳಿಸುವ ಕಾರ್ಯಯದಲ್ಲಿ ತೊಡಗಿಕೊಂಡಿದೆ.
BIGG NEWS : ಬೆಂಗಳೂರು ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನ.17 ರವರೆಗೆ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
BIG NEWS: ʻಪ್ರಸಾರ ಭಾರತಿʼಯ ನೂತನ ಸಿಇಒ ಆಗಿ ʻಗೌರವ್ ದ್ವಿವೇದಿʼ ನೇಮಕ | Gaurav Dwivedi
ಹರಿಯಾಣ: ʻಮೃತ ಅಭ್ಯರ್ಥಿʼಯನ್ನು ಪಂಚಾಯತ್ ಚುನಾವಣೆಯಲ್ಲಿ ಹೆಚ್ಚು ಮತ ನೀಡಿ ಗೆಲ್ಲಿಸಿದ ಗ್ರಾಮಸ್ಥರು!
BIGG NEWS : ಬೆಂಗಳೂರು ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನ.17 ರವರೆಗೆ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ