ಶಿವಮೊಗ್ಗ : ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 15 ರ ಇಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಇಂದು ಸಂಜೆ 4.10 ಕ್ಕೆ ತರೀಕೆರೆಯ ಹಳೆ ವಿಜ್ಞಾನ ಇಂಡಸ್ಟ್ರೀಸ್ ಲಿ. ಹೆಲಿಪ್ಯಾಡ್ನಿಂದ ಹೊರಟು 4.45 ಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿ ಹೆಲಿಪ್ಯಾಡ್ಗೆ ಆಗಮಿಸಿ, ಆನವಟ್ಟಿಯ ಹೈಸ್ಕೂಲ್ ಗ್ರೌಂಡ್ ಆವರಣದಲ್ಲಿ ಆಯೋಜಿಸಲಾಗಿರುವ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 6.30 ಕ್ಕೆ ರಸ್ತೆ ಮೂಲಕ ಆನವಟ್ಟಿಯಿಂದ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರು ತಲುಪುವರು ಎಂದು ಪ್ರಕಟಣೆ ತಿಳಿಸಿದೆ.