ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ (ಏಮ್ಸ್) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಾಲ್ಕು ವರ್ಷದ ಮಗುವಿಗೆ ಬಡಿಸಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
ಮಗುವಿಗೆ ಬಡಿಸಿದ ದಾಲ್ನಲ್ಲಿ ಕೀಟ ಕಂಡುಬಂದಿದೆ ಎಂದು ಪೋಷಕರು ಹೇಳಿಕೊಂಡಿದ್ದಾರೆ ಮತ್ತು ಊಟದ ತಟ್ಟೆಯಲ್ಲಿ ಜಿರಳೆಯ ಭಾಗಗಳಂತೆ ಕಾಣುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಖಾಸಗಿ ವಾರ್ಡ್ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಘಟನೆಯ ಕುರಿತು ಆಸ್ಪತ್ರೆಯ ಆಡಳಿತವು ತನಿಖೆಯನ್ನು ಪ್ರಾರಂಭಿಸಿದೆ.
“ರಾಷ್ಟ್ರೀಯ ರಾಜಧಾನಿಯಲ್ಲಿನ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸೌಲಭ್ಯದಲ್ಲಿ ಕರುಣಾಜನಕ ಮತ್ತು ಭಯಾನಕ ಸ್ಥಿತಿ ಕಂಉಬಂದಿದೆ. 4 ವರ್ಷದ ಮಗುವಿಗೆ ಬಡಿಸಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಟ್ವಿಟ್ಟರ್ ಬಳಕೆದಾರ ಸಾಹಿಲ್ ಜೈದಿ ಟ್ವೀಟ್ ಮಾಡಿದ್ದಾರೆ.
Shocking : This is the most expensive Private ward of AIIMS where Patient Kin complained that Cockroach found in ‘Daal’ Served to 4 year old Sick Child.
एम्स के प्राइवेट वार्ड के मरीज की दाल में कॉकरोच की शिकायत pic.twitter.com/LHw1nYNEo9
— Hemant Rajaura (@hemantrajora_) November 14, 2022
Pathetic and frightening state of affairs at the most prestigious Medical facility in National Capital- Serving „Cockroach Daal“ to a 4 year old as first meal post major stomach surgery @aiims_newdelhi Shocked beyond belief 😒 pic.twitter.com/FU2fu7LuxH
— sahil zaidi (@sahilzaidi3) November 13, 2022
AIIMS ಇಂತಹ ಆರೋಪಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಮೊನ್ನೆ ನಡೆದ ಘಟನೆಯಲ್ಲಿ ಆಸ್ಪತ್ರೆಯ ವೈದ್ಯರ ಮೆಸ್ನಲ್ಲಿ ನೀಡಿದ್ದ ಊಟದಲ್ಲಿ ಕೀಟ ಪತ್ತೆಯಾಗಿತ್ತು.
Good news: ಇನ್ಮುಂದೆ ಏಕಕಾಲದಲ್ಲಿ ಎರಡಕ್ಕೂ ಹೆಚ್ಚು ಮೊಬೈಲ್ಗಳಲ್ಲಿ ನಿಮ್ಮ ʻWhatsAppʼ ಖಾತೆ ಬಳಸಬಹುದು!
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?