ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಕೋಲಾರಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?
ಆದರೆ ಅದನ್ನು ಈವರೆಗೂ ಖಚಿತ ಪಡಿಸಿಲ್ಲ. ಕ್ಷೇತ್ರದಲ್ಲಿ ನಾಡಿಮಿಡಿತ ಅರಿಯುವುದಕ್ಕೆ ಬಂದ ಸಿದ್ದರಾಮಯ್ಯ ಭೇಟಿ ಕೊಲಾರ ಕ್ಷೇತ್ರದಲ್ಲಿ ಸಂಚಲನ, ವಿರೋಧಿ ನಾಯಕರಿಗೆ ತಳಮಳ ಆರಂಭವಾಗಿದೆ.
ರಾಜ್ಯದಲ್ಲಿ ಈಗ ಚುನಾವಣೆ ಹತ್ತಿರವಾಗುತ್ತಿದ್ದು ದಿನೇದಿನೇ ಚರ್ಚೆಗಳು ಗರಿಗೆದರುತ್ತಿವೆ. ಅದರಲ್ಲೂ ಚಿನ್ನದ ನಾಡು ಕೋಲಾರದ ಜಿಲ್ಲಾ ಕೇಂದ್ರ ಕೋಲಾರ ಈಗ ಸಾಕಷ್ಟು ಗಮನಸೆಳೆಯುತ್ತಿದೆ. ಕಾರಣ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಾರೆ ಎನ್ನೋದು.
BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?
ಸ್ಪರ್ದೆಯನ್ನು ಈವರೆಗೂ ಖಚಿತಪಡಿಸದ ಸಿದ್ದು ಸಂಪೂರ್ಣವಾಗಿ ತಳ್ಳಿಯೂ ಹಾಕಿಲ್ಲ. ನಿನ್ನೆ ಕೋಲಾರಕ್ಕೆ ಬಂದಾಗಲೂ ಸಹ ಸ್ಪರ್ದೆ ಖಚಿತ ಪಡಿಸಿಲ್ಲ. ಆದ್ರೆ ಈಗಾಗಲೆ ವಿರೋಧಿಗಳ ಪಾಳಯದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಪ್ರತಿಕ್ರಿಯೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಇಲ್ಲಿಗೆ ಬಂದರೆ ಸೋಲಿಸುತ್ತೇವೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.